ವಿಶ್ವಸಂಸ್ಥೆಯಿಂದ ದೀಪಾವಳಿ ಸ್ಟ್ಯಾಂಪ್‌ ಬಿಡುಗಡೆ

0
402

ವಿಶ್ವಸಂಸ್ಥೆಯ ಅಂಚೆ ಆಡಳಿತ ವಿಭಾಗವು ದೀಪಾವಳಿ ಸ್ಮರಣಾರ್ಥ ನವೆಂಬರ್ 7 ರ ಬುಧವಾರ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. 1.15 ಡಾಲರ್‌ ಮುಖಬೆಲೆಯ 10 ಅಂಚೆ ಚೀಟಿಗಳು ದೀಪಾವಳಿ ಹಬ್ಬದ ಮಹತ್ವ ಸಾರುವ ವಿಶೇಷ ಚಿತ್ರಗಳನ್ನು ಒಳಗೊಂಡಿವೆ. ವಿಶ್ವಸಂಸ್ಥೆಯ ಈ ಕ್ರಮವನ್ನು ಭಾರತ ಅಭಿನಂದಿಸಿದೆ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಅಂಚೆ ಆಡಳಿತ ವಿಭಾಗವು ದೀಪಾವಳಿ ಸ್ಮರಣಾರ್ಥ ನವೆಂಬರ್ 7 ರ  ಬುಧವಾರ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.

1.15 ಡಾಲರ್‌ ಮುಖಬೆಲೆಯ 10 ಅಂಚೆ ಚೀಟಿಗಳು ದೀಪಾವಳಿ ಹಬ್ಬದ ಮಹತ್ವ ಸಾರುವ ವಿಶೇಷ ಚಿತ್ರಗಳನ್ನು ಒಳಗೊಂಡಿವೆ. ವಿಶ್ವಸಂಸ್ಥೆಯ ಈ ಕ್ರಮವನ್ನು ಭಾರತ ಅಭಿನಂದಿಸಿದೆ. 

”ವಿಶ್ವಸಂಸ್ಥೆಯಲ್ಲಿ ನಿತ್ಯವೂ ಒಳಿತು-ಕೆಡುಕಿನ ನಡುವೆ ಕದನ ನಡೆಯುತ್ತಲೇ ಇದೆ. ಒಳಿತು ಗೆಲ್ಲಬೇಕು ಎನ್ನುವ ನಮ್ಮ ಹಂಬಲಕ್ಕೆ ಸ್ಟ್ಯಾಂಪ್‌ ಮೂಲಕ ಸಾಥ್‌ ನೀಡಿದ ವಿಶ್ವಸಂಸ್ಥೆಗೆ ಅಭಿನಂದನೆಗಳು,” ಎಂದು ಭಾರತದ ಕಾಯಂ ಪ್ರತಿನಿಧಿ ಸಯ್ಯದ್‌ ಅಕ್ಬರುದ್ದಿನ್‌ ಟ್ವೀಟ್‌ ಮಾಡಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ಅವರು ಭಾರತೀಯರಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.