ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿ ” ಕೆಲ್ಲಿ ನೈಟ್ ಕ್ರಾಫ್ಟ್” ನೇಮಕ

0
536

ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿ ಕೆಲ್ಲಿ ನೈಟ್ ಕ್ರಾಫ್ಟ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ವಾಷಿಂಗ್ಟನ್‌(ಪಿಟಿಐ): ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿ ಕೆಲ್ಲಿ ನೈಟ್ ಕ್ರಾಫ್ಟ್ ಅವರನ್ನು ಅಮೆರಿಕ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ಭಾರತ–ಅಮೆರಿಕನ್‌ ನಿಕ್ಕಿ ಹ್ಯಾಲೆ ಸದ್ಯ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ವರ್ಷಾಂತ್ಯದೊಳಗೆ ಹಾಲಿ ಹುದ್ದೆಯನ್ನು ‌ತೊರೆಯುವುದಾಗಿ ನಿಕ್ಕಿ ಹ್ಯಾಲೆ ಅವರು ಅಕ್ಟೋಬರ್‌ ತಿಂಗಳಲ್ಲಿ ಘೋಷಿಸಿದ್ದರು.

56 ವರ್ಷದ ಕ್ರ್ಯಾಫ್ಟ್‌ ಅವರ ನೇಮಕಕ್ಕೆ ಇನ್ನು ಸೆನೆಟ್‌ ಅನುಮೋದನೆ ನೀಡಬೇಕಾಗಿದೆ.

‘ಸದ್ಯ ಕೆನಡಾ ರಾಯಭಾರಿಯಾಗಿರುವ ನೈಟ್‌ ಕ್ರ್ಯಾಫ್ಟ್‌ ಅವರನ್ನು ವಿಶ್ವಸಂಸ್ಥೆಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.