ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಜಿಮ್​ಯಾಂಗ್ ಕಿಮ್ ರಾಜೀನಾಮೆ

0
920

ಜಿಮ್ ಯಾಂಗ್ ಕಿಮ್ , ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಯಿಂದ ಮುಂದಿನ ತಿಂಗಳು ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

ವಾಷಿಂಗ್ಟನ್: ಜಿಮ್ ಯಾಂಗ್ ಕಿಮ್ , ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಯಿಂದ ಮುಂದಿನ ತಿಂಗಳು ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

2019 ಜನೇವರಿ 7 ರ ಸೋಮವಾರ ತಮ್ಮ ನಿರ್ಧಾರವನ್ನು ಟ್ವಿಟರ್​ನಲ್ಲಿ ತಿಳಿಸಿರುವ ಕಿಮ್ ‘ವಿಶ್ವದ ಬಡತನ ನಿಮೂಲನೆ ಉದ್ದೇಶ ಹೊಂದಿರುವ ಪ್ರತಿಷ್ಠಿತ ಸಂಸ್ಥೆಯೊಂದರ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ಅದೃಷ್ಟವೇ ಸರಿ. ಆತ್ಮಸಮರ್ಪಣಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸುವ ಈ ಸಂಸ್ಥೆಯ ಸಿಬ್ಬಂದಿ ನನಗೆ ಸಿಕ್ಕಿದ್ದಕ್ಕೆ ಹೆಮ್ಮೆಯಿದೆ ’ ಎಂದಿದ್ದಾರೆ.

ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಕಿಮ್ ಅಧಿಕಾರ ಸ್ವೀಕರಿಸಿ ಫೆಬ್ರುವರಿ. 1ಕ್ಕೆ 19 ತಿಂಗಳು ಆಗಲಿದೆ. ಖಾಸಗಿ ಸಂಸ್ಥೆಯನ್ನು ಸೇರ್ಪಡೆಯಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡಲು ಕಿಮ್ ಮುಂದಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಆಡಳಿತ ಅವಧಿ ಮುಗಿಯಲು ಮೂರು ವರ್ಷ ಬಾಕಿಯಿರುವಾಗಲೇ ಅವರು ಈ ನಿರ್ಧಾರ ಘೋಷಿಸಿದ್ದಾರೆ. ವಿಶ್ವಬ್ಯಾಂಕ್ ಮೇಲೆ ಅಮೆರಿಕ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇತರ ಸದಸ್ಯ ರಾಷ್ಟ್ರಗಳು ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಿಗೆ ಕಿಮ್ ರಾಜೀನಾಮೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.