ವಿಶ್ವದ 2ನೇ ದೊಡ್ಡ ಡ್ಯಾಂ: ಭಾರತದಲ್ಲಿ

0
38

ಮಾಜಿ ಪ್ರಧಾನಿ ಜವಾಹರ್​ಲಾಲ್ ನೆಹರು ಅಧಿಕಾರಾವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆ.17ರಂದು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಡ್ಯಾಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದ ಮೊದಲ ಪ್ರಧಾನಿ ಜವಾಹರ್​ಲಾಲ್ ನೆಹರು ಅಧಿಕಾರಾವಧಿಯಲ್ಲಿ ಶಂಕುಸ್ಥಾಪನೆಗೊಂಡಿದ್ದ ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ಪ್ರಧಾನಿ ನರೇಂದ್ರ ಮೋದಿ ಸೆ.17ರಂದು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಡ್ಯಾಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುಜರಾತ್​ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದಲ್ಲಿ ನಿರ್ವಣಗೊಂಡಿರುವ ಈ ಅಣೆಕಟ್ಟೆಗೆ 56 ವರ್ಷಗಳ ಹಿಂದೆ ನೆಹರು ಅಡಿಗಲ್ಲು ಹಾಕಿದ್ದರು. ‘ಅಣೆಕಟ್ಟೆಗೆ ಗೇಟ್​ಗಳನ್ನು ಅಳವಡಿಸಲು ಕಾಂಗ್ರೆಸ್ ಸರ್ಕಾರವೇ ಅನುಮೋದನೆ ನೀಡಿರಲಿಲ್ಲ. ಆದರೆ, ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ 17 ದಿನಗಳಲ್ಲಿ ಅನುಮೋದನೆ ಕೊಟ್ಟರು. ಮೂರು ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡಿತು. ಜೂನ್ ತಿಂಗಳಲ್ಲಿ ಡ್ಯಾಂ ಎತ್ತರವನ್ನು 121.92ನಿಂದ 138 ಮೀಟರ್​ಗೆ ಏರಿಸಲಾಯಿತು. ಇದರಿಂದ ನೀರಿನ ಶೇಖರಣಾ ಸಾಮರ್ಥ್ಯ 1.27 ಲಕ್ಷ ಘನ ಮೀಟರ್​ನಿಂದ, 4.73ಲಕ್ಷ ಘನ ಮೀಟರ್​ಗೆ ಏರಿಕೆ ಯಾಯಿತು‘ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಹೇಳಿದ್ದಾರೆ. -ಏಜೆನ್ಸೀಸ್

ಡ್ಯಾಂ ವಿಶೇಷ

  • 138 ಮೀಟರ್ ಎತ್ತರ
  • ಭಾರತದ ಅತಿ ದೊಡ್ಡ ಹಾಗೂ ವಿಶ್ವದ ಎರಡನೇ ಅತಿ ದೊಡ್ಡ ಅಣೆಕಟ್ಟೆ
  • 1.2 ಕಿ.ಮೀ ಉದ್ದ
  • 4.73ಲಕ್ಷ ಘನ ಮೀಟರ್ ನೀರು ಶೇಖರಣಾ ಸಾಮರ್ಥ್ಯ
  • 18 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು
  • 9 ಲಕ್ಷ ಗ್ರಾಮಗಳಿಗೆ ಪ್ರಯೋಜನ

 

ವಿಳಂಬಕ್ಕೆ ಕಾರಣವೇನು?

ಮೇಧಾ ಪಾಟ್ಕರ್ ನೇತೃತ್ವದಲ್ಲಿ ನಡೆದ ನರ್ಮದಾ ಬಚಾವೋ ಆಂದೋಲನದಿಂದ ಈ ಯೋಜನೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. 1996ರಲ್ಲಿ ಯೋಜನೆ ಕಾಮಗಾರಿ ಸ್ಥಗಿತಗೊಂಡಿತ್ತು. 2000ನೇ ಇಸವಿಯಲ್ಲಿ ಸುಪ್ರೀಂಕೋರ್ಟ್ ಯೋಜನೆ ಪರವಾಗಿ ತೀರ್ಪು ನೀಡಿತ್ತು. ಜತೆಗೆ ಕೆಲ ಷರತ್ತುಗಳನ್ನು ವಿಧಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಯೋಜನೆ ಪೂರ್ಣಗೊಳಿಸಲು ಅಷ್ಟಾಗಿ ಆಸಕ್ತಿ ತೋರಿಸಿರಲಿಲ್ಲ.

ಅಮೆರಿಕದಲ್ಲಿದೆ ಅತಿ ದೊಡ್ಡ ಡ್ಯಾಂ

ಅಮೆರಿಕದಲ್ಲಿ ಕೊಲಂಬಿಯಾ ನದಿಗೆ ನಿರ್ವಿುಸಿರುವ ಗ್ರ್ಯಾಂಡ್ ಕೌಲಿ ವಿಶ್ವದ ಅತ್ಯಂತ ದೊಡ್ಡ ಅಣೆಕಟ್ಟಾಗಿದ್ದು, 168 ಮೀಟರ್ ಎತ್ತರವಿದೆ.