ವಿಶ್ವದ ಮೊದಲ ಡ್ರೋನ್ ಹಡಗು ನಿರ್ಮಾಣ (ಭೂಮಿ, ವಾಯುಮಾರ್ಗದ ದಾಳಿ ಎದುರಿಸಲು ಸಮರ್ಥ: ಚೀನಾ)

0
371

ಚೀನಾ, ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಹಡಗನ್ನು ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ಪೂರೈಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಬೀಜಿಂಗ್ (ಪಿಟಿಐ): ಚೀನಾ, ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಹಡಗನ್ನು ನಿರ್ಮಿಸಿ ಯಶಸ್ವಿಯಾಗಿ ಪರೀಕ್ಷೆ ಪೂರೈಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. 

ಈ ಡ್ರೋನ್ ಹಡಗು ಭೂಮಿ ಹಾಗೂ ವಾಯುಮಾರ್ಗದ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಚೀನಾದ ಸೇನಾತಜ್ಞರು ಹೇಳಿದ್ದಾರೆ. 

ಚೀನಾ ಹಡಗು ನಿರ್ಮಾಣ ಉದ್ದಿಮೆ ನಿಗಮದ (ಸಿಎಸ್‌ಐಸಿ) ಅಡಿಯಲ್ಲಿ ವುಚಂಗ್ ಹಡಗು ನಿರ್ಮಾಣ ಉದ್ದಿಮೆ ಸಮೂಹ ಈ ಡ್ರೋನ್ ಹಡಗು ತಯಾರಿಸಿದ್ದು, ಇದಕ್ಕೆ ಮರೈನ್ ಲಿಜರ್ಡ್ ಎಂದು ಹೆಸರಿಡಲಾಗಿದೆ. 

ವಾಯು–ಭೂಮಿ–ಸಮುದ್ರ ಮಾರ್ಗಗಳಲ್ಲಿ ಎದುರಾಗುವ ದಾಳಿಗಳನ್ನು ಸಮಗ್ರವಾಗಿ ಮತ್ತು ಮಾನವರಹಿತವಾಗಿ ನಿರ್ವಹಿಸಲು ಡ್ರೋನ್ ಹಡಗು ಸಮರ್ಥವಾಗಿದೆ ಎನ್ನುತ್ತದೆ ವರದಿ.

ಮರೈನ್ ಲಿಜರ್ಡ್ ವಿಶೇಷತೆ

# ಎರಡು ಮೆಷಿನ್ ಗನ್, ಜಲ ಮತ್ತು ವಾಯುಮಾರ್ಗದಲ್ಲಿ ಉಡಾವಣೆ ಮಾಡುವಂತಹ ಕ್ಷಿಪಣಿಗಳ ಸಂಗ್ರಹ ಮತ್ತು ಉಡಾವಣಾ ವ್ಯವಸ್ಥೆ ಮಾಡಲಾಗಿದೆ

# ಸ್ವಯಂಚಾಲಿತವಾಗಿ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅಡೆತಡೆಗಳನ್ನು ನಿವಾರಿಸಿಕೊಂಡು ಸಂಚರಿಸುವ ಸಾಮರ್ಥ್ಯ ಇದೆ

# ಕರಾವಳಿಗಳ ರಕ್ಷಣೆಗೆ ಈ ಡ್ರೋನ್ ಹಡಗು ಬಳಕೆ ಅತ್ಯುತ್ತಮವಾದುದು ಎನ್ನುವುದು ಸೇನೆಯ ನಿಲುವು

# ಉಪಗ್ರಹದ ಮೂಲಕ ನಿಯಂತ್ರಣ, ಡಿಸೇಲ್ ಚಾಲಿತ ಹೈಡ್ರೊಜೆಟ್, ಎಲೆಕ್ಟ್ರೋ ಆಪ್ಟಿಕಲ್ ಮತ್ತು ರೇಡಾರ್ ವ್ಯವಸ್ಥೆ

# 1,200 ಕಿ.ಲೋ ಮೀಟರ್ ಕಾರ್ಯನಿರ್ವಹಣಾ ವ್ಯಾಪ್ತಿ

# 12 ಮೀ ಹಡಗಿನ ಉದ್ದ

# 50 ನ್ಯಾಟಿಕಲ್ ಗರಿಷ್ಟ ವೇಗ

# 20 ಕಿ.ಮೀ ಭೂಮಿ ಮೇಲಿನ ಗರಿಷ್ಠ ವೇಗ

# 12,34,875 ಕೋಟಿ ರೂ ವೆಚ್ಚಚಾಗಿದೆ