ವಿಶ್ವದ ಪ್ರಸಿದ್ಧ ತಾಣ ಹಂಪಿ

0
800

ಜಗತ್ತಿನಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ 52 ಪ್ರವಾಸಿ ತಾಣಗಳನ್ನು ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಗುರುತಿಸಿದ್ದು, ಅದರಲ್ಲಿ ವಿಶ್ವವಿಖ್ಯಾತ ಹಂಪಿಗೆ ಎರಡನೇ ಸ್ಥಾನ ಕಲ್ಪಿಸಿದೆ.

ಹೊಸಪೇಟೆ: ಜಗತ್ತಿನಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ 52 ಪ್ರವಾಸಿ ತಾಣಗಳನ್ನು ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಗುರುತಿಸಿದ್ದು, ಅದರಲ್ಲಿ ವಿಶ್ವವಿಖ್ಯಾತ ಹಂಪಿಗೆ ಎರಡನೇ ಸ್ಥಾನ ಕಲ್ಪಿಸಿದೆ.

ಕೆಲ ವರ್ಷಗಳ ಹಿಂದೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹಂಪಿಯನ್ನು ಸೇರಿಸಲಾಗಿತ್ತು. ಇತ್ತೀಚೆಗೆ ಏಷ್ಯಾದ ಅತ್ಯುತ್ತಮ ಪ್ರವಾಸಿ ತಾಣ ಎಂದು ಹೆಸರಿಸಲಾಗಿತ್ತು. ಅದರ ಬೆನ್ನಲ್ಲೇ ‘ನ್ಯೂಯಾರ್ಕ್‌ ಟೈಮ್ಸ್‌‘ ಜಾಗತಿಕ ಪ್ರವಾಸಿ ತಾಣಗಳಲ್ಲಿ ಹಂಪಿಯನ್ನು ಹೆಸರಿಸಿರುವುದರಿಂದ ಭೂಖಂಡದಲ್ಲಿ ಅದರ ಹಿರಿಮೆ ಹೆಚ್ಚಿದಂತಾಗಿದೆ. ಪಟ್ಟಿಯಲ್ಲಿ, ಕೆರಿಬಿಯನ್‌ ದ್ವೀಪ ಪೋರ್ಟೊ ರಿಕೊ ಮೊದಲ ಸ್ಥಾನದಲ್ಲಿದೆ.

ಹಂಪಿ ಜಗತ್ತಿನ ಅಪರೂಪದ ಪುರಾತನ, ಶ್ರೀಮಂತ ವಾಸ್ತುಶಿಲ್ಪದಿಂದ ಕೂಡಿರುವ ಸ್ಮಾರಕಗಳನ್ನು ಹೊಂದಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಹಂಪಿ ಸಮೀಪದ ಜಿಂದಾಲ್‌ಗೆ ನೇರ ವಿಮಾನ ಸೌಲಭ್ಯ ಕಲ್ಪಿಸಿರುವುದರಿಂದ, ಜಗತ್ತಿನ ಯಾವುದೇ ಭಾಗದ ಜನ ಅಲ್ಲಿಗೆ ಭೇಟಿ ಕೊಡಬಹುದು ಎಂದು ಪತ್ರಿಕೆ ಉಲ್ಲೇಖಿಸಿದೆ.

ಹಂಪಿಗೆ ಈ ಸ್ಥಾನಮಾನ ಸಿಕ್ಕಿರುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎ.ಎಸ್‌.ಐ.) ಹಂಪಿ ವೃತ್ತದ ಅಧಿಕಾರಿ, ಪುರಾತತ್ವ ವಿಭಾಗದ ಪ್ರಾಧ್ಯಾಪಕರು, ಪರಿಸರ ಹೋರಾಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ.

‘ಈಗಿನ ಮೂಲಸೌಕರ್ಯ ಸಾಲದು. ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಣೆ ಆಗಬೇಕು’ ಎಂದು ಪ್ರಾಧ್ಯಾಪಕ  ಸಿ.ಎಸ್‌. ವಾಸುದೇವನ್‌ ತಿಳಿಸಿದರು.