ವಿಶ್ವದ ಅತಿ ಎತ್ತರದ ಮರಳಿನ ಕೋಟೆ: ಗಿನ್ನಿಸ್ ದಾಖಲೆ

0
32

ಜರ್ಮನಿಯಲ್ಲಿ ವಿಶ್ವದ ಅತಿ ಎತ್ತರದ ಮರಳಿನ ಕೋಟೆ ನಿರ್ಮಾಣವಾಗಿದ್ದು, 16.68 ಮೀಟರ್‌ ಎತ್ತರದ ಇದು ಗಿನ್ನಿಸ್ ದಾಖಲೆ ಸೇರಿದೆ. ಭಾರತದ ಕಲಾವಿದ ಸುದರ್ಶನ್‌ ಪಟ್ನಾಯಕ್ ಅವರು ಈ ಹಿಂದೆ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಇದು ಮುರಿದಿದೆ.

ವಿಶ್ವದ ಅತಿ ಎತ್ತರದ ಮರಳಿನ ಕೋಟೆ:-

ಜರ್ಮನಿಯಲ್ಲಿ ವಿಶ್ವದ ಅತಿ ಎತ್ತರದ ಮರಳಿನ ಕೋಟೆ ನಿರ್ಮಾಣವಾಗಿದ್ದು, 16.68 ಮೀಟರ್‌ ಎತ್ತರದ ಇದು ಗಿನ್ನಿಸ್ ದಾಖಲೆ ಸೇರಿದೆ. ಭಾರತದ ಕಲಾವಿದ ಸುದರ್ಶನ್‌ ಪಟ್ನಾಯಕ್ ಅವರು ಈ ಹಿಂದೆ ನಿರ್ಮಿಸಿದ್ದ ಗಿನ್ನಿಸ್ ದಾಖಲೆಯನ್ನು ಇದು ಮುರಿದಿದೆ.

ಪಟ್ನಾಯಕ್ ಅವರು 2017 ಫೆಬ್ರುವರಿಯಲ್ಲಿ ಪುರಿಯ ಕಡಲತೀರದಲ್ಲಿ 14.84 ಮೀಟರ್ ಎತ್ತರದ ಮರಳಿನ ಕೋಟೆ ನಿರ್ಮಿಸಿದ್ದರು.

ಅಥೆನ್ಸ್‌ನ ಆಕ್ರೊಪೊಲಿಸ್ ಹಾಗೂ ಪಿಸಾದ ವಾಲುವ ಗೋಪುರ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವ ಸ್ಥಳಗಳನ್ನು ಈ ಮರಳಿನ ಕೋಟೆಯ ಮೇಲೆ ಚಿತ್ರಿಸಲಾಗಿದೆ.

ಜರ್ಮನ್‌ನ ಪ್ರವಾಸಿ ಸಂಸ್ಥೆ ಶಾನ್ಸ್‌ಲ್ಯಾಂಡ್‌ ರೈಸನ್‌ ಈ ಮರಳಿನ ಕೋಟೆ ನಿರ್ಮಾಣವನ್ನು ಸಂಘಟಿಸಿತ್ತು. ಹಲವು ಕಲಾವಿದರು ಒಟ್ಟಾಗಿ ನಿರ್ಮಿಸಿದ ಈ ಕೋಟೆಯನ್ನು ಗಿನ್ನಿಸ್ ವಿಶ್ವ ದಾಖಲೆಯ ನಿರ್ಣಾಯಕರಾದ ಜ್ಯಾಕ್ ಬ್ರಾಕ್‌ಬ್ಯಾಂಕ್ ಅವರು ಪರಿಶೀಲಿಸಿದ್ದಾರೆ. ಲೇಸರ್ ತಂತ್ರಜ್ಞಾನ ಬಳಸಿ ಎತ್ತರ ಅಳತೆ ಮಾಡಿದ ಬಳಿಕ, ಮರಳಿನ ಕೋಟೆ ಅಧಿಕೃತವಾಗಿ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿದೆ.