ವಿಶ್ವಕಪ್ ಆಯಿತು, ವಿಶ್ವ ಟ್ವೆಂಟಿ–20 :ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಣೆ

0
314

ವಿಶ್ವ ಟ್ವೆಂಟಿ–20 ಟೂರ್ನಿಯು 2020ರಿಂದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಾಗಲಿದೆ.ಈ ಕುರಿತು ನವೆಂಬರ್ 23 ರ ಶುಕ್ರವಾರ ಪ್ರಕಟಣೆ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ‘ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ ಮಾದರಿಯಲ್ಲಿ ಟ್ವೆಂಟಿ–20 ಕ್ರಿಕೆಟ್‌ ಅನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶ ಇದಾಗಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಮತ್ತು ಪುರುಷರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಾಗಿ ಆಯೋಜನೆಗೊಳ್ಳಲಿವೆ’ ಎಂದು ತಿಳಿಸಿದೆ.

ದುಬೈ (ಪಿಟಿಐ): ವಿಶ್ವ ಟ್ವೆಂಟಿ–20 ಟೂರ್ನಿಯು 2020ರಿಂದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಾಗಲಿದೆ.

ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ‘ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌  ಮಾದರಿಯಲ್ಲಿ ಟ್ವೆಂಟಿ–20 ಕ್ರಿಕೆಟ್‌ ಅನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶ ಇದಾಗಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಮತ್ತು ಪುರುಷರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಾಗಿ ಆಯೋಜನೆಗೊಳ್ಳಲಿವೆ’ ಎಂದು ತಿಳಿಸಿದೆ.

‘ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎನ್ನುವುದು ಬಹುತೇಕ ಎಲ್ಲ ಕ್ರಿಕೆಟಿಗರ ಗುರಿಯಾಗಿರುತ್ತದೆ. ಇದೀಗ ಅಂತಹವರಿಗೆಲ್ಲ ಟ್ವೆಂಟಿ–20 ಮಾದರಿಯಲ್ಲಿಯೂ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಗಲಿದೆ. ಇದೊಂದು ಬೋನಸ್‌’ ಎಂದು ಐಸಿಸಿ ಹೇಳಿದೆ.

‘ಐಸಿಸಿಯ ಈ ನಿರ್ಣಯವು ಸೂಕ್ತವಾಗಿದೆ. ಇದರಿಂದ ಟ್ವೆಂಟಿ–20 ಕ್ರಿಕೆಟ್‌ನ ಘನತೆ ಮತ್ತಷ್ಟು ಹೆಚ್ಚಲಿದೆ’ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಸ್ವಾಗತಿಸಿದ್ದಾರೆ.