ವಿಶ್ವಕಪ್‌ಗೆ “ಸತ್ಯನ್‌ ಜ್ಞಾನಶೇಖರನ್‌” ಅರ್ಹತೆ (ಏಷ್ಯಾಕಪ್‌ನಲ್ಲಿ ಆರನೇ ಸ್ಥಾನ ಗಳಿಸಿದ ಆಟಗಾರ)

0
304

ಭಾರತದ ಸತ್ಯನ್‌ ಜ್ಞಾನಶೇಖರನ್‌, ಮುಂಬರುವ ವಿಶ್ವಕಪ್‌ಗೆ ರಹದಾರಿ ಪಡೆದಿದ್ದಾರೆ.ಏಪ್ರೀಲ್ 7 ರ ಭಾನುವಾರ ಇಲ್ಲಿ ನಡೆದ ಐಟಿಟಿಎಫ್‌–ಎಟಿಟಿಯು ಏಷ್ಯಾಕಪ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ.

ಯೊಕೊಹಾಮ (ಪಿಟಿಐ): ಭಾರತದ ಸತ್ಯನ್‌ ಜ್ಞಾನಶೇಖರನ್‌, ಮುಂಬರುವ ವಿಶ್ವಕಪ್‌ಗೆ ರಹದಾರಿ ಪಡೆದಿದ್ದಾರೆ.

ಭಾನುವಾರ ಇಲ್ಲಿ ನಡೆದ ಐಟಿಟಿಎಫ್‌–ಎಟಿಟಿಯು ಏಷ್ಯಾಕಪ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಆರನೇ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ.

ವಿಶ್ವಕಪ್‌ ಟೂರ್ನಿ ಅಕ್ಟೋಬರ್‌ 18 ರಿಂದ 20ರವರೆಗೆ ಚೀನಾದ ಚೆಂಗ್ಡುದಲ್ಲಿ ಆಯೋಜನೆ ಯಾಗಿದೆ.

5–6ನೇ ಸ್ಥಾನ ನಿರ್ಧರಿಸಲು ಭಾನುವಾರ ನಡೆದ ಪೈಪೋಟಿಯಲ್ಲಿ ಸತ್ಯನ್‌ ಸೋತರು.

ಚೀನಾ ತೈಪೆಯ 17 ವರ್ಷದ ಆಟಗಾರ ಲಿನ್‌ ಯುನ್‌ ಜು 11–4, 11–8, 11–8, 14–12ರಿಂದ ಭಾರತದ ಆಟಗಾರನಿಗೆ ಆಘಾತ ನೀಡಿದರು. ಶನಿವಾರ, ಹಾಂಕಾಂಗ್‌ನ ಆಟಗಾರ, ವಿಶ್ವ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಚುನ್‌ ಟಿಂಗ್‌ ವಾಂಗ್‌ಗೆ ಆಘಾತ ನೀಡಿ ಗಮನ ಸೆಳೆದಿದ್ದ ಸತ್ಯನ್‌, ಲಿನ್‌ ಎದುರು ಮಂಕಾದರು.

ಇತ್ತೀಚೆಗೆ ನಡೆದಿದ್ದ ಚಾಲೆಂಜ್‌ ಪ್ಲಸ್‌ ಒಮನ್‌ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಲಿನ್‌, ಮೊದಲ ಗೇಮ್‌ನಲ್ಲಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನದಲ್ಲಿರುವ ಸತ್ಯನ್‌ ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ದಿಟ್ಟ ಆಟ ಆಡಿದರು. ನಾಲ್ಕನೇ ಗೇಮ್‌ನಲ್ಲೂ  ರೋಚಕ ಹಣಾಹಣಿ ಕಂಡುಬಂತು. ನಿರ್ಣಾಯಕ ಘಟ್ಟದಲ್ಲಿ ಮಿಂಚಿದ ಲಿನ್‌ ಸಂಭ್ರಮಿಸಿದರು.