ವಿಲೀನಕ್ಕೆ ವಿಜಯ ಬ್ಯಾಂಕ್‌ ಒಪ್ಪಿಗೆ

0
856

ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕ್‌ ಜತೆ ವಿಲೀನವಾಗಲು ವಿಜಯ ಬ್ಯಾಂಕ್‌ನ ಆಡಳಿತ ಮಂಡಳಿ ಶನಿವಾರ ಒಪ್ಪಿಗೆ ನೀಡಿದೆ.

ನವದೆಹಲಿ (ಪಿಟಿಐ): ಬ್ಯಾಂಕ್‌ ಆಫ್‌ ಬರೋಡಾ ಮತ್ತು ದೇನಾ ಬ್ಯಾಂಕ್‌ ಜತೆ ವಿಲೀನವಾಗಲು ವಿಜಯ ಬ್ಯಾಂಕ್‌ನ ಆಡಳಿತ ಮಂಡಳಿ ಸೆಪ್ಟೆಂಬರ್ 29 ರ ಶನಿವಾರ ಒಪ್ಪಿಗೆ ನೀಡಿದೆ.

ವಿಲೀನದಿಂದ ವಹಿವಾಟಿನ ಗಾತ್ರ ಹೆಚ್ಚಾಗಲಿದ್ದು, ಜಾಗತಿಕ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ವಿಜಯ ಬ್ಯಾಂಕ್‌ ಆಡಳಿತ ಮಂಡಳಿ ತಿಳಿಸಿದೆ.

ಮೂರು ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ದೇಶದ ಮೂರನೇ ಅತಿದೊಡ್ಡ ಬ್ಯಾಂಕ್‌ ರಚನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

 ಈ ಕುರಿತು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಸಭೆ ನಡೆಸಿ ವಿಲೀನ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ದೇನಾ ಬ್ಯಾಂಕ್‌ ವಿಜಯ ಬ್ಯಾಂಕ್‌ಗಳು ತಮ್ಮ ಒಪ್ಪಿಗೆ ಸೂಚಿಸಿವೆ. ಇನ್ನು ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ಒಪ್ಪಿಗೆ ದೊರೆಯಬೇಕಿದೆ.