ವಿರಾಟ್​ ಕೊಹ್ಲಿ ದಾಖಲೆ ಮುರಿದ ಆಸ್ಟ್ರೇಲಿಯಾದ​ ಮಾಜಿ ನಾಯಕ “ಸ್ಟೀವನ್​ ಸ್ಮಿತ್​”

0
49

ಪ್ರತಿಷ್ಠಿತ ಆಶಸ್​ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್​ ಸ್ಮಿತ್​ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸ್ಮಿತ್​ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಾಖಲೆಯೊಂದನ್ನು ಮುರಿದಿದ್ದಾರೆ.

ಲಂಡನ್​: ಪ್ರತಿಷ್ಠಿತ ಆಶಸ್​ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ಧ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್​ ಸ್ಮಿತ್​ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಸ್ಮಿತ್​ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ದಾಖಲೆಯೊಂದನ್ನು ಮುರಿದಿದ್ದಾರೆ.

ಸ್ಟೀವನ್​ ಸ್ಮಿತ್​ ಇಂಗ್ಲೆಂಡ್​ ವಿರುದ್ಧ 144 ರನ್​ ಗಳಿಸಿದರು ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 24ನೇ ಶತಕ ದಾಖಲಿಸಿದರು. ಇವರು 24 ಶತಕಗಳನ್ನು ಕೇವಲ 118 ಇನಿಂಗ್ಸ್​ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ 24 ಶತಕಗಳನ್ನು ಅತ್ಯಂತ ವೇಗವಾಗಿ ಗಳಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೊದಲು ವಿರಾಟ್​ ಕೊಹ್ಲಿ 123 ಇನಿಂಗ್ಸ್​ಗಳಲ್ಲಿ 24 ಶತಕ ಗಳಿಸುವ ಮೂಲಕ ಅತ್ಯಂತ ವೇಗವಾಗಿ ಶತಕ ಗಳಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಸ್ಮಿತ್​ ಈ ಶತಕದ ಮೂಲಕ ಆಶಸ್​ ಸರಣಿಯಲ್ಲಿ 9 ನೇ ಶತಕ ಸಿಡಿಸಿದರು ಮತ್ತು ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಂಡಕ್ಕೆ ಮರಳಿದ ಬಳಿಕ ಅವರು ಗಳಿಸಿದ ಮೊದಲ ಶತಕವೂ ಆಗಿದೆ.

ಆಸ್ಟ್ರೇಲಿಯಾದ ಡಾನ್​ ಬ್ರಾಡ್ಮನ್​ ಅವರು ಕೇವಲ 66 ಇನಿಂಗ್ಸ್​ಗಳಲ್ಲಿ 24 ಶತಕ ಗಳಿಸುವ ಮೂಲಕ ಅತ್ಯಂತ ವೇಗವಾಗಿ 24 ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಭಾರತ ತಂಡದ ಮಾಜಿ ಆಟಗಾರ ಸಚಿನ್​ ತೆಂಡುಲ್ಕರ್​ 125 ಇನಿಂಗ್ಸ್​ಗಳಲ್ಲಿ 24 ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.