ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ನಿವೃತ್ತಿ

0
21

ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‌ಜಿ ಅವರು ನಿವೃತ್ತಿ ಹೊಂದಲಿದ್ದಾರೆ.

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‌ಜಿ ಅವರು ನಿವೃತ್ತಿ ಹೊಂದಲಿದ್ದಾರೆ.

ಪ್ರೇಮ್‌ಜಿ ಅವರು ಜುಲೈ 30ರಿಂದ ಕಾರ್ಯನಿರ್ವಾಹಕಯೇತರ ನಿರ್ದೇಶಕ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಪ್ರೇಮ್‌ಜಿ ಅವರು 53 ವರ್ಷಗಳವರೆಗೆ ಸಂಸ್ಥೆ ಮುನ್ನಡೆಸಿದ್ದಾರೆ.

ರಿಷದ್‌ಗೆ ಹೊಣೆಗಾರಿಕೆ: ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿರುವ ಪ್ರೇಮ್‌ಜಿ ಅವರ ಪುತ್ರ ರಿಷದ್‌ ಪ್ರೇಮ್‌ಜಿ ಅವರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬಿದಾಲಿ ನಿಮೂಚವಾಲಾ ಅವರ ಹುದ್ದೆಯನ್ನು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೆಶಕ ಎಂದು ಬದಲಾವಣೆ ಮಾಡಲಾಗಿದೆ. ಷೇರುದಾರರ ಒಪ್ಪಿಗೆ ಪಡೆದ ಬಳಿಕ ಜುಲೈ 31ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ.

ವಿಪ್ರೊ ಸಂಸ್ಥೆಯ ಸ್ಥಾಪನೆ : ಡಿಸೆಂಬರ್ 29, 1945

# ವಿಪ್ರೊ ಸಂಸ್ಥೆಯ ಸ್ಥಾಪಕರು :ಮೊಹಮ್ಮದ್ ಹಶಿಮ್  ಪ್ರೇಮ್‌ಜಿ 

# ವಿಪ್ರೊ ಸಂಸ್ಥೆಯ ಕೇಂದ್ರ ಕಚೇರಿ : ಬೆಂಗಳೂರು