ವಿಪ್ರೊದ ಅಧ್ಯಕ್ಷ ಅಜೀಂ ಪ್ರೇಮ್‌ಜಿ ದಾನ: ₹1.45ಲಕ್ಷ ಕೋಟಿಗೆ ತಲುಪಿದ ಕೊಡುಗೆ

0
590

ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ಸಂಸ್ಥೆಯಲ್ಲಿ ತಮ್ಮ ಪಾಲು ಬಂಡವಾಳದ ಶೇ 34ರಷ್ಟನ್ನು ದತ್ತಿ ಕಾರ್ಯಕ್ರಮಗಳಿಗೆ ನೀಡಲು ಮುಂದಾಗಿದ್ದಾರೆ.

ನವದೆಹಲಿ (ರಾಯಿಟರ್ಸ್‌): ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆ
ಯಾಗಿರುವ ವಿಪ್ರೊದ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ಸಂಸ್ಥೆಯಲ್ಲಿ ತಮ್ಮ ಪಾಲು ಬಂಡವಾಳದ ಶೇ 34ರಷ್ಟನ್ನು ದತ್ತಿ ಕಾರ್ಯಕ್ರಮಗಳಿಗೆ ನೀಡಲು ಮುಂದಾಗಿದ್ದಾರೆ.

52,500 ಕೋಟಿ ಮೊತ್ತದ ಈ ವಾಗ್ದಾನದಿಂದಾಗಿ ಪ್ರೇಮ್‌ಜಿ ಅವರು ದಾನ ಧರ್ಮದ ಉದ್ದೇಶಕ್ಕೆ ಕೊಡಮಾಡಲಿರುವ ಒಟ್ಟಾರೆ ಮೊತ್ತ  1.45 ಲಕ್ಷ ಕೋಟಿಗೆ ತಲುಪಲಿದೆ ಎಂದು ಅಜೀಂ ಪ್ರೇಮ್‌ಜಿ ಫೌಂಡೇಷನ್‌ ತಿಳಿಸಿದೆ. ದೇಶದ ಎರಡನೆ ಅತಿದೊಡ್ಡ ಸಿರಿವಂತರಾಗಿರುವ ಪ್ರೇಮ್‌ಜಿ ಅವರ ಒಡೆತನದಲ್ಲಿ ಇರುವ ಸಂಸ್ಥೆಗಳು ವಿಪ್ರೊದಲ್ಲಿ ಶೇ 74ರಷ್ಟು ಪಾಲು ಬಂಡವಾಳ ಹೊಂದಿವೆ.

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಲಾಭರಹಿತ ಸಂಘಟನೆಯಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿದೆ.