ವಿಧಾನ ಪರಿಷತ್​ಗೆ 11 ಸದಸ್ಯರು ಅವಿರೋಧ ಆಯ್ಕೆ

0
20

2018 ಜೂನ್ 4 ರಂದು ನಡೆದ ಕರ್ನಾಟಕ ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಜನರೂ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರು:   2018 ಜೂನ್ 4 ರಂದು ನಡೆದ ವಿಧಾನಪರಿಷತ್​ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಜನರೂ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕುಮಾರಸ್ವಾಮಿ ತಿಳಿಸಿದರು.

ಚುನಾವಣೆ ನಂತರ ಮಾತನಾಡಿ, ಕಾಂಗ್ರೆಸ್​ನಿಂದ ನಾಲ್ವರು, ಜೆಡಿಎಸ್​ನಿಂದ ಇಬ್ಬರು, ಬಿಜೆಪಿಯಿಂದ ಐವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಯಾರೂ ಹಿಂಪಡೆಯದ ಕಾರಣ ಎಲ್ಲರೂ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಬಿಜೆಪಿಯಿಂದ ರವಿಕುಮಾರ್​, ತೇಜಸ್ವಿನಿಗೌಡ, ರಘುನಾಥ್​, ಕೆ.ಪಿ.ನಂಜುಂಡಿ, ರುದ್ರೇಗೌಡ, ಕಾಂಗ್ರೆಸ್​ನಿಂದ ಗೋವಿಂದರಾಜ, ಸಿಎಂ ಇಬ್ರಾಹಿಂ, ಅರವಿಂದ್​ಕುಮಾರ್​, ಹರೀಶ್​ಕುಮಾರ್​, ಜೆಡಿಎಸ್​ನಿಂದ ಬಿ.ಎಂ.ಫಾರುಕ್​, ಧರ್ಮೇಗೌಡ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.