‘ವಿದ್ಯಾನಿಧಿ’ ಸಂಸ್ಥೆಗೆ ಕನ್ನಡ ಪುಸ್ತಕ ಪ್ರಾಧಿಕಾರದ 2017 ನೇ ಸಾಲಿನ “ಅತ್ಯುತ್ತಮ ಪ್ರಕಾಶನ ಪ್ರಶಸ್ತಿ”

0
361

ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ವಾರ್ಷಿಕ ಪ‍್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಗದಗದ ವಿದ್ಯಾನಿಧಿ ಪ್ರಕಾಶನವು (ಜಯದೇವ ಮೆಣಸಗಿ) ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಪ್ರಶಸ್ತಿಯು ₹1 ಲಕ್ಷ ಬಹುಮಾನ ಒಳಗೊಂಡಿದೆ.

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2017ನೇ ವಾರ್ಷಿಕ ಪ‍್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದ್ದು, ಗದಗದ ವಿದ್ಯಾನಿಧಿ ಪ್ರಕಾಶನವು (ಜಯದೇವ ಮೆಣಸಗಿ) ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಪ್ರಶಸ್ತಿಯು 1 ಲಕ್ಷ ಬಹುಮಾನ ಒಳಗೊಂಡಿದೆ.

ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ (75 ಸಾವಿರ ಬಹುಮಾನ) ವಿದ್ವಾಂಸ ಷ.ಶೆಟ್ಟರ್, ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ(50 ಸಾವಿರ ಬಹುಮಾನ) ಪ್ರಕಾಶಕ ನ.ರವಿಕುಮಾರ್‌ ಹಾಗೂ ಅನುಪಮಾ ನಿರಂಜನ ವೈದ್ಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ(25 ಸಾವಿರ ಬಹುಮಾನ) ವೈದ್ಯ ಸಾಹಿತಿ ಎಚ್.ಗಿರಿಜಮ್ಮ ಅವರು ಪಾತ್ರರಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ನವೆಂಬರ್ 30 ರ ಶುಕ್ರವಾರ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಈ ಮಾಹಿತಿ ನೀಡಿದರು. 

ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಕೇವಲ 30 ಕೃತಿಗಳನ್ನು ಆಯ್ಕೆಮಾಡಲಾಗುತ್ತಿತ್ತು. ಆದರೆ, ಪ್ರಾಧಿಕಾರದ ಬೆಳ್ಳಿ ಹಬ್ಬದ ನಿಮಿತ್ತ ಈ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ, ಪ್ರೋತ್ಸಾಹ ಧನಕ್ಕೆ ಈ ಬಾರಿ 136 ಹಸ್ತ ಪ್ರತಿಗಳು ಬಂದಿದ್ದು, 53 ಕೃತಿಗಳು ಆಯ್ಕೆಯಾಗಿವೆ’ ಎಂದರು. 

‘ಇದೇ ಮೊದಲ ಬಾರಿಗೆ ದಲಿತ ಸಾಹಿತಿಗಳ ಕೃತಿ ಪ್ರಕಟಣೆಗೆ ಧನಸಹಾಯ ನೀಡಲು ಪ್ರಾಧಿಕಾರ ಮುಂದಾಗಿದ್ದು, 104 ಹಸ್ತ ಪ್ರತಿಗಳು ಬಂದಿದ್ದವು. 51 ಕೃತಿಗಳು ಆಯ್ಕೆಯಾಗಿವೆ. 60 ಪುಟಗಳ ಕೃತಿಗೆ 15 ಸಾವಿರ,ರೂ 100 ಪುಟಗಳ ಕೃತಿಗೆ 20,000, ರೂ 150– 200 ಪುಟಗಳ ಕೃತಿಗೆ 30,000 ರೂ ಹಾಗೂ 200ಕ್ಕೂ ಹೆಚ್ಚು ಪುಟಗಳಿರುವ ಕೃತಿಗೆ 35,000 ರೂ ಧನ ಸಹಾಯ ನೀಡಲಾಗುತ್ತದೆ’ ಎಂದು ತಿಳಿಸಿದರು. 

‘ವಿವಿಧ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಸೊಬಗು ಬಹುಮಾನ ಮತ್ತು ಚೊಚ್ಚಲ ಕೃತಿಗಳ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್‌ನಲ್ಲಿ ನಡೆಯಲಿದೆ. ದಲಿತ ಸಾಹಿತಿಗಳ ಕೃತಿಗಳ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್‌ 27ರಂದು ಬದಾಮಿಯಲ್ಲಿ ನಡೆಯಲಿದೆ’ ಎಂದು ತಿಳಿಸಿದರು.