ವಿದೇಶಿ ಹಣ ಸ್ವೀಕರಿಸುವಲ್ಲಿ ಭಾರತಕ್ಕೆ ಮೊದಲ ಸ್ಥಾನ

0
384

ವಿದೇಶದಲ್ಲಿರುವ ಭಾರತೀಯರು ತಮ್ಮ ಕುಟುಂಬಕ್ಕೆ ಹಣವನ್ನು ಕಳುಹಿಸುವಲ್ಲಿ ಮೊದಲಿನಂತೆಯೇ ಬದ್ಧವಾಗಿದ್ದಾರೆ. ವಿಶ್ವಬ್ಯಾಂಕ್‌ ವರದಿ ಪ್ರಕಾರ, 2018ರಲ್ಲಿ 8000 ಕೋಟಿ ಡಾಲರ್‌ (5.60 ಲಕ್ಷ ಕೋಟಿ ರೂ.) ಭಾರತಕ್ಕೆ ವಿದೇಶದಿಂದ ಹರಿದು ಬಂದಿದೆ.

ವಿದೇಶದಲ್ಲಿರುವ ಭಾರತೀಯರು ತಮ್ಮ ಕುಟುಂಬಕ್ಕೆ ಹಣವನ್ನು ಕಳುಹಿಸುವಲ್ಲಿ ಮೊದಲಿನಂತೆಯೇ ಬದ್ಧವಾಗಿದ್ದಾರೆ. ವಿಶ್ವಬ್ಯಾಂಕ್‌ ವರದಿ ಪ್ರಕಾರ, 2018 ರಲ್ಲಿ 8000 ಕೋಟಿ ಡಾಲರ್‌ (5.60 ಲಕ್ಷ ಕೋಟಿ ರೂ.) ಭಾರತಕ್ಕೆ ವಿದೇಶದಿಂದ ಹರಿದು ಬಂದಿದೆ. ಮುಂದಿನ ಸ್ಥಾನವನ್ನು ಹೊಂದಿರುವ ದೇಶಗಳನ್ನು ನಾವು ಈ ಕೆಳಕಂಡಂತೆ ಕಾಣಬಹುದಾಗಿದೆ. 

# ಎರಡನೇ ಸ್ಥಾನ ಚೀನಾ (4.69 ಲಕ್ಷ ಕೋಟಿ ರೂ.),

# ಮೂರನೇ ಮೆಕ್ಸಿಕೋ, ಫಿಲಿಪೀನ್ಸ್‌ (2.38 ಲಕ್ಷ ಕೋಟಿ ರೂ.) 

# ನಾಲ್ಕನೇ ಈಜಿಪ್ತ್ (1.82 ಲಕ್ಷ ಕೋಟಿ ರೂ.)ಗೆ ಸಿಕ್ಕಿದೆ.

ಕಳೆದ ಕೆಲವು ವರ್ಷಗಳಿಂದ ವಿದೇಶದಿಂದ ಭಾರತಕ್ಕೆ ಹರಿದು ಬರುತ್ತಿರುವ ಹಣದಲ್ಲಿ ಭಾರಿ ಏರಿಕೆಯಾಗಿದೆ. 2017ರಲ್ಲಿ ಹೀಗೆ ವಿದೇಶದಿಂದ ಹರಿದು ಬಂದ ಹಣವೇ ಜಿಡಿಪಿಯ ಶೇ. 2.7 ರಷ್ಟಾಗಿತ್ತು. ಸರಾಸರಿ ಶೇ. 10.3 ದರದಲ್ಲಿ ಒಳಹರಿವು ಮೊತ್ತ ಏರಿಕೆಯಾಗಿದ್ದು, ಮುಂದಿನ ವರ್ಷ ಇದು ಶೇ. 3.7ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ನಿರೀಕ್ಷಿಸಿದೆ.

ಅಮೆರಿಕ ಹಾಗೂ ಇತರ ದೇಶಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರಿಂದ ಈ ಹಣದ ಹರಿವು ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ಗಲ್ಫ್ ದೇಶಗಳ ಹೊರಹರಿವು ಕೂಡ ಒಟ್ಟು ಶೇ. 13ರಷ್ಟು ಹೆಚ್ಚಳವಾಗಿದ್ದು, ಭಾರತಕ್ಕೆ ಅನುಕೂಲವಾಗಿ ಪರಿಣಮಿಸಿದೆ.