‘ವಿಡೋ ಆಫ್‌ ಸೈಲೆನ್ಸ್‌’ಗೆ ಗ್ರ್ಯಾಂಡ್‌ ಜ್ಯೂರಿ ಪ್ರಶಸ್ತಿ

0
341

ಇಲ್ಲಿ ನಡೆದ ಲಾಸ್‌ ಏಂಜಲೀಸ್‌ ಭಾರತೀಯ ಚಲನಚಿತ್ರೋತ್ಸವದಲ್ಲಿ ‘ವಿಡೋ ಆಫ್‌ ಸೈಲೆನ್ಸ್‌’ ಗ್ರ್ಯಾಂಡ್‌ ಜ್ಯೂರಿ ಪ್ರಶಸ್ತಿ ಪಡೆದಿದೆ.

ಲಾಸ್‌ ಏಂಜಲೀಸ್‌ (ಪಿಟಿಐ): ಇಲ್ಲಿ ನಡೆದ ಲಾಸ್‌ ಏಂಜಲೀಸ್‌ ಭಾರತೀಯ ಚಲನಚಿತ್ರೋತ್ಸವದಲ್ಲಿ ‘ವಿಡೋ ಆಫ್‌ ಸೈಲೆನ್ಸ್‌’ ಗ್ರ್ಯಾಂಡ್‌ ಜ್ಯೂರಿ ಪ್ರಶಸ್ತಿ ಪಡೆದಿದೆ. 

ಚಿತ್ರವನ್ನು ಪ್ರವೀಣ್‌ ಮೋರ್ಚಾಲ್‌ ನಿರ್ದೇಶಿಸಿದ್ದಾರೆ. ಕಳೆದುಹೋದ ಪತಿಯ ಮರಣ ಪ್ರಮಾಣ ಪತ್ರ ಪಡೆಯಲು ಮುಸ್ಲಿಂ ಮಹಿಳೆ ನಡೆಸುವ ಹೋರಾಟವನ್ನು ಈ ಚಿತ್ರ ಬಿಂಬಿಸಿದೆ. 

‘ವಿಶ್ವದಲ್ಲಿ ನೇರವಾಗಿ ಕಾಣಲಾಗದ ಆದರೆ ಪ್ರತಿ ದಿನವೂ ನಮ್ಮ ನಡುವೆಯೇ ಇರುವ ಪಾತ್ರಗಳ ಸ್ಥಿತಿಗತಿಯ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಈ ಕಾರಣಕ್ಕಾಗಿ ಚಿತ್ರವು ಪ್ರಶಸ್ತಿಗೆ ಪಾತ್ರವಾಗಿದೆ’ ಎಂದು ಸಂಘಟಕರು ಹೇಳಿದ್ದಾರೆ.

ನಿರ್ದೇಶಕರಾದ ಸಂಧ್ಯಾ ಸೂರಿ ಅವರ ‘ದಿ ಫೀಲ್ಡ್‌’ ಕಿರುಚಿತ್ರ ಕೂಡಾ ಇದೇ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜಕೀಯ ವಿಷಯಾಧರಿತ ಆನಂದ ಪಟವರ್ಧನ್‌ ಅವರ ‘ದಿ ರೀಸನ್‌’ ಮತ್ತು ಶಾಜಿಯಾ ಇಕ್ಬಾಲ್‌ ಅವರ ‘ಬೇಬಾಕ್‌’ ಕಿರುಚಿತ್ರ ಕೂಡಾ ಪ್ರಶಸ್ತಿ ಬಾಚಿಕೊಂಡಿದೆ. 

ಅನಾಮಿಕ ಹಕ್ಸರ್‌ ಅವರ, ‘ಟೇಕಿಂಗ್‌ ದಿ ಹಾರ್ಸ್‌ ಟು ಈಟ್‌ ಜಲೇಬೀಸ್‌’ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆಯ ಗೌರವ ಪ್ರಶಸ್ತಿ ನೀಡಲಾಯಿತು.  ನಟಿ ಟಬು ಅವರನ್ನು ಉತ್ಸವದಲ್ಲಿ ಸನ್ಮಾನಿಸಲಾಯಿತು. ಅವರ ಹೊಸ ಚಿತ್ರ ಅಂಧಾದುನ್‌ ಚೀನಾದಲ್ಲಿ ಬಿಡುಗಡೆಯಾಗಿದ್ದು,  200 ಕೋಟಿ ಗಳಿಕೆ ದಾಖಲಿಸಿದೆ.