‘ವಿಕಸನ’ದ ಜಾಡು ಹಿಡಿದವರಿಗೆ 2018 ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಗೌರವ

0
703

ಅಮೆರಿಕದ ವಿಜ್ಞಾನಿಗಳಾದ ಫ್ರಾನ್ಸಿಸ್‌ ಆರ್ನಾಲ್ಡ್, ಜಾರ್ಜ್ ಸ್ಮಿತ್ ಹಾಗೂ ಬ್ರಿಟನ್‌ನ ಸಂಶೋಧಕ ಗ್ರೆಗೋರಿ ವಿಂಟರ್ ಅವರು 2018 ಸಾಲಿನ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸ್ಟಾಕ್‌ಹೋಮ್ (ಎಎಫ್‌ಪಿ): ಅಮೆರಿಕದ ವಿಜ್ಞಾನಿಗಳಾದ ಫ್ರಾನ್ಸಿಸ್‌ ಆರ್ನಾಲ್ಡ್, ಜಾರ್ಜ್ ಸ್ಮಿತ್ ಹಾಗೂ ಬ್ರಿಟನ್‌ನ ಸಂಶೋಧಕ ಗ್ರೆಗೋರಿ ವಿಂಟರ್ ಅವರು 2018 ಸಾಲಿನ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಐದನೇ ಮಹಿಳೆ: ಫ್ರಾನ್ಸಿಸ್‌ ಅವರು ರಸಾಯನವಿಜ್ಞಾನದಲ್ಲಿ ನೊಬೆಲ್ ಪಡೆದ ಐದನೇ ಮಹಿಳೆಯಾಗಿದ್ದಾರೆ. ಫ್ರಾನ್ಸಿಸ್‌ ಅವರು ಪ್ರಶಸ್ತಿಯ ಅರ್ಧ ಮೊತ್ತವನ್ನು (ಸುಮಾರು 3.5 ಕೋಟಿ), ಸ್ಮಿತ್ ಮತ್ತು ವಿಂಟರ್ ಅವರು ಉಳಿದ ಮೊತ್ತವನ್ನು ಪಡೆಯಲಿದ್ದಾರೆ. 

ಡಾರ್ವಿನ್ನನ ವಿಕಾಸದ ತತ್ವಗಳಿಂದ ಪ್ರೇರಣೆ ಪಡೆದು ಇವರು ಪ್ರೊಟೀನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವು ಬಹಳಷ್ಟು ರಾಸಾಯನಿಕ ಸಮಸ್ಯೆಗಳನ್ನು ಪರಿಹರಿಸುತ್ತವೆ. ಅಂದರೆ ಜೈವಿಕ ಇಂಧನದಿಂದ ಹಿಡಿದು ಔಷಧಿಗಳವರೆಗೆ ಎಲ್ಲಕ್ಕೂ ಬಳಕೆಯಾಗಲಿವೆ ಎಂದು ಸಮಿತಿ ತಿಳಿಸಿದೆ.

ವಿಕಸನದ ಅಗಾಧ ಶಕ್ತಿಯನ್ನು ಅರಿತ ವಿಜ್ಞಾನಿಗಳು, ಟೆಸ್ಟ್‌ಟ್ಯೂಬ್‌ಗಳಲ್ಲಿ ಇದನ್ನು ಪ್ರಯೋಗಿಸಿದ್ದಾರೆ. ಸಾವಿರ ಪಟ್ಟು ವೇಗವಾಗಿ ವಿಕಸನ ಪ್ರಕ್ರಿಯೆಯನ್ನು ಸಾಧ್ಯವಾಗಿಸಿ, ಪ್ರೊಟೀನ್‌ಗಳನ್ನು ಸೃಷ್ಟಿಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನದ ಎಂಜಿನಿಯರ್ ಆಗಿರುವ ಆರ್ನಾಲ್ಡ್ ಅವರ ಸಂಶೋಧನೆಯು, ಈಗಿರುವ ವಿಷಕಾರಿ ರಾಸಾಯನಿಕಗಳನ್ನು ಬದಲಿಸಲು ನೆರವಾಗಲಿದೆ. 

ಏನು ಉಪಯೋಗ?:  ಕಬ್ಬು ಮೊದಲಾದ ಮರುಬಳಕೆ ಮಾಡುವ ಸಂಪನ್ಮೂಲಗಳನ್ನು ಜೈವಿಕ ಇಂಧನಗಳಾಗಿ ಪರಿವರ್ತಿಸುವಲ್ಲಿ ಆರ್ನಾಲ್ಡ್ ಅಭಿವೃದ್ಧಿಪಡಿಸಿರುವ ಪ್ರೊಟೀನ್‌ಗಳು ಬಳಕೆಯಾಗಲಿವೆ. ಸಾರಿಗೆ ಸಂಚಾರ ಕ್ಷೇತ್ರಕ್ಕೆ ಇದು ಕೊಡುಗೆ ಯಾಗಲಿದೆ. ಹೆಚ್ಚೆಚ್ಚು ಪರಿಸರ ಸ್ನೇಹಿ ರಾಸಾಯನಿಕ ವಸ್ತುಗಳು, ಔಷಧಗಳ ತಯಾರಿಕೆಗೆ ನೆರವಾಗಲಿವೆ. ತಂಪುಹವೆಯ ವಾತಾವರಣದಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಬಳಸುವ ಡಿಟರ್ಜೆಂಟ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲೂ ಸಹಾಯಕವಾಗಲಿವೆ.