ವಿಂಬಲ್ಡನ್‌ ವಾರ್‌ ಇಂದಿನಿಂದ

0
18

ಸ್ವಿಸ್‌ ಮಾಸ್ಟರ್‌ ಹಾಗೂ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌, ಇಲ್ಲಿ ಆರಂಭವಾಗಲಿರುವ ಪ್ರಸಕ್ತ ಸಾಲಿನ 3ನೇ ಗ್ರ್ಯಾನ್‌ ಸ್ಪ್ಯಾಮ್‌ ಟೂರ್ನಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಎನಿಸಿದ್ದಾರೆ.

ಹುಲ್ಲು ಹಾಸಿನ ಅಂಗಣದಲ್ಲಿ ನಡೆಯುವ ಏಕಮಾತ್ರ ಗ್ರ್ಯಾನ್‌ ಸ್ಲಾಮ್‌ ಟೂರ್ನಿ ಆಗಿರುವ ವಿಂಬಲ್ಡನ್‌ನಲ್ಲಿ ಮಾಜಿ ಚಾಂಪಿಯನ್‌ ಅಮೆರಿಕದ ಸೆರೆನಾ ವಿಲಿಯಮ್ಸ್‌ ವೃತ್ತಿ ಬದುಕಿನ 24ನೇ ಸಿಂಗಲ್ಸ್‌ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ.

ಲಂಡನ್‌: ಸ್ವಿಸ್‌ ಮಾಸ್ಟರ್‌ ಹಾಗೂ ಹಾಲಿ ಚಾಂಪಿಯನ್‌ ರೋಜರ್‌ ಫೆಡರರ್‌, ಇಲ್ಲಿ ಆರಂಭವಾಗಲಿರುವ ಪ್ರಸಕ್ತ ಸಾಲಿನ 3ನೇ ಗ್ರ್ಯಾನ್‌ ಸ್ಪ್ಯಾಮ್‌ ಟೂರ್ನಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಹಾಟ್‌ ಫೇವರಿಟ್‌ ಎನಿಸಿದ್ದಾರೆ. 

ಹುಲ್ಲು ಹಾಸಿನ ಅಂಗಣದಲ್ಲಿ ನಡೆಯುವ ಏಕಮಾತ್ರ ಗ್ರ್ಯಾನ್‌ ಸ್ಲಾಮ್‌ ಟೂರ್ನಿ ಆಗಿರುವ ವಿಂಬಲ್ಡನ್‌ನಲ್ಲಿ ಮಾಜಿ ಚಾಂಪಿಯನ್‌ ಅಮೆರಿಕದ ಸೆರೆನಾ ವಿಲಿಯಮ್ಸ್ ವೃತ್ತಿ ಬದುಕಿನ 24ನೇ ಸಿಂಗಲ್ಸ್‌ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ. 

ಕಳೆದ ವರ್ಷ ಆಸ್ಪ್ರೇಲಿಯಾ ಓಪನ್‌ ಮತ್ತು ವಿಂಬಲ್ಡನ್‌ ಟ್ರೋಫಿ ಗೆದ್ದು ವಿಶ್ವದ ನಂ.1 ರ‍್ಯಾಂಕಿಂಗ್‌ ಮರಳಿ ಸಂಪಾದಿಸಿದ್ದ ಫೆಡರರ್‌, ಪ್ರಸಕ್ತ ಸಾಲಿನಲ್ಲೂ ಆಸ್ಪ್ರೇಲಿಯಾ ಓಪನ್‌ನಲ್ಲಿ ಗೆಲುವು ದಾಖಲಿಸಿದ್ದಾರೆ. ಇದೀಗ ಅದೇ ಆತ್ಮವಿಶ್ವಾಸದಲ್ಲಿ ಆಲ್‌ ಇಂಗ್ಲೆಂಡ್‌ ಕ್ಲಬ್‌ ಅಂಗಣಕ್ಕೆ ಮರಳಿದ್ದಾರೆ. 

ವೃತ್ತಿ ಬದುಕಿನ 9ನೇ ವಿಂಬಲ್ಡನ್‌ ಮತ್ತು 21ನೇ ಗ್ರ್ಯಾನ್‌ ಸ್ಲಾಮ್‌ ಸಿಂಗಲ್ಸ್‌ ಕಿರೀಟ ಎತ್ತಿ ಹಿಡಿಯುವ ವಿಶ್ವಾಸ ಹೊಂದಿರುವ 36 ವರ್ಷದ ಅನುಭವಿ ಆಟಗಾರ ಫೆಡರರ್‌, ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಆಟಗಾರ ದುಸಾನ್‌ ಲಾಜೊವಿಚ್‌ ವಿರುದ್ಧ ಸೋಮವಾರ ಪೈಪೋಟಿ ನಡೆಸಲಿದ್ದಾರೆ. ಸದ್ಯ ವಿಶ್ವದ 2ನೇ ರ‍್ಯಾಂಕ್‌ ಅಲಂಕರಿಸಿರುವ ರೋಜರ್‌, 4ನೇ ಸುತ್ತಿನಲ್ಲಿ 16ನೇ ಶ್ರೇಯಾಂಕಿತ ಆಟಗಾರ ಬೊರ್ನಾ ಚೊರಿಚ್‌ ವಿರುದ್ಧ ಸೆಣಸುವ ಸಾಧ್ಯತೆ ಇದೆ. ಚೊರಿಚ್‌, ಇತ್ತೀಚೆಗಷ್ಟೇ ನಡೆದ ಹ್ಯಾಲೆ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಫೆಡರರ್‌ಗೆ ಆಘಾತ ನೀಡಿದ್ದರು. ಇನ್ನು ಸೆಮಿಫೈನಲ್‌ನಲ್ಲಿ ಕಳೆದ ಬಾರಿಯ ರನ್ನರ್‌ಅಪ್‌ ಮರಿನ್‌ ಚಿಲಿಚ್‌ ಎದುರಾಗುವ ಸಾಧ್ಯತೆ ಇದೆ.