ವಿಂಗ್ ಕಮಾಂಡರ್ ಅಭಿನಂದನ್‌ಗೆ ‘ಭಗವಾನ್ ಮಹಾವೀರ್ ಅಹಿಂಸಾ’ ಪುರಸ್ಕಾರ!

0
1084

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ‘ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಮಾರ್ಚ್ 3 ಭಾನುವಾರ ಅಖಿಲ್ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ.

ನಾಸಿಕ್: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ‘ಭಗವಾನ್ ಮಹಾವೀರ್ ಅಹಿಂಸಾ ಪುರಸ್ಕಾರ’ ನೀಡಿ ಗೌರವಿಸಲಾಗುವುದು ಎಂದು ಮಾರ್ಚ್ 3 ಭಾನುವಾರ ಅಖಿಲ್ ಭಾರತೀಯ ದಿಗಂಬರ ಜೈನ ಮಹಾಸಮಿತಿ ತಿಳಿಸಿದೆ. 

ವೀರಯೋಧ ಅಭಿನಂದನ್ ಅವರು ಈ ಅತ್ಯುತ್ತಮ ಪುರಸ್ಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಪಾಕಿಸ್ತಾನದ ಎಫ್-16 ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಮಿಗ್-21 ವಿಮಾನದ ಪೈಲಟ್ ಅಭಿನಂದನ್ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಹೊಸದಿಲ್ಲಿಯಲ್ಲಿ ಮಹಾಸಮಿತಿಯ ಅಧ್ಯಕ್ಷ ಮುನೀಂದ್ರ ಜೈನ್ ತಿಳಿಸಿದ್ದಾರೆ. 

2.51 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನೊಳಗೊಂಡ ಈ ಪುರಸ್ಕಾರವನ್ನು ಮಹಾವೀರ ಜಯಂತಿ ದಿನ (ಏಪ್ರಿಲ್ 17) ಪ್ರದಾನ ಮಾಡಲಾಗುವುದು ಎಂದು ಮಹಸಮಿತಿಯ ನಿರ್ವಾಹಕ ಪರಾಸ್ ಲೊಹಾಡೆ ತಿಳಿಸಿದ್ದಾರೆ.