ಭಾರತ ಸರ್ಕಾರವು ಇಸ್ರೇಲ್ನಿಂದ 100 ಕ್ಕೂ ಹೆಚ್ಚು ಸ್ಪೈಸ್ 2000 ಬಾಂಬ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಮೊದಲ ಬ್ಯಾಚ್ನ ಬಾಂಬ್ಗಳು ವಾಯುಪಡೆಗೆ ಹಸ್ತಾಂತರವಾಗಿವೆ.
ಗ್ವಾಲಿಯರ್: ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಷ್ ಎ ಮೊಹಮದ್ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್ ನಿರ್ಮಿತ ಶಕ್ತಿಶಾಲಿ ಸ್ಪೈಸ್ 2000 ಬಾಂಬ್ ಬಳಸಲಾಗಿತ್ತು. ಬಾಲಾಕೊಟ್ ದಾಳಿಯ ನಂತರ ಇಸ್ರೇಲ್ನಿಂದ 100 ಕ್ಕೂ ಹೆಚ್ಚು ಸ್ಪೈಸ್ 2000 ಬಾಂಬ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಮೊದಲ ಬ್ಯಾಚ್ನ ಬಾಂಬ್ಗಳು ವಾಯುಪಡೆಗೆ ಹಸ್ತಾಂತರವಾಗಿವೆ.
ಕಳೆದ ಜೂನ್ನಲ್ಲಿ ಇಸ್ರೇಲ್ನಿಂದ 250 ಕೋಟಿ ರೂ. ವೆಚ್ಚದಲ್ಲಿ 100ಕ್ಕೂ ಸ್ಪೈಸ್ 2000 ಬಾಂಬ್ ಮತ್ತು ಮಾರ್ಕ್ 84 ಸಿಡಿತಲೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೊದಲ ಬ್ಯಾಚ್ನ ಬಾಂಬ್ಗಳು ಮತ್ತು ಸಿಡಿತಲೆಗಳು ಮಿರಾಜ್ 2000 ಯುದ್ಧ ವಿಮಾನಗಳ ಪ್ರಮುಖ ನೆಲೆಯಾಗಿರುವ ಮಧ್ಯಪ್ರದೇಶದ ಗ್ವಾಲಿಯರ್ ತಲುಪಿವೆ.
ಮಾರ್ಕ್ 84 ಸಿಡಿತಲೆ ಹೊಂದಿರುವ ಸ್ಪೈಸ್ 2000 ಬಾಂಬ್ಗಳು ಶತ್ರುಗಳ ಕಟ್ಟಡ, ಬಂಕರ್ಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡುವ ಸಾಮರ್ಥ್ಯ ಹೊಂದಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ 2ನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಸೇನೆಯ ಬಲವರ್ಧನೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದರ ಭಾಗವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸೇನೆಗಾಗಿ ಖರೀದಿಸಲು ಒಪ್ಪಿಗೆ ನೀಡಲಾಗಿದೆ. (ಏಜೆನ್ಸೀಸ್)