ವಾಟ್ಸ್​ಆ್ಯಪ್​ ವಾಯ್ಸ್​ ಕಾಲ್​ ಮೂಲಕ ವೈರಸ್​ ದಾಳಿ: ತಕ್ಷಣವೇ ಆ್ಯಪ್​ ಅನ್ನು ಅಪ್ಡೇಟ್​ ಮಾಡಿಕೊಳ್ಳಲು ಸೂಚನೆ

0
186

ವಾಟ್ಸ್​ಆ್ಯಪ್​ ವಾಯ್ಸ್​ಕಾಲ್​ ಮೂಲಕ ಮಿಸ್ಡ್​ಕಾಲ್​ ಕೊಟ್ಟು ವೈರಸ್​ ಅನ್ನು ಬಿಡುಗಡೆ ಮಾಡುವ ಅತ್ಯಾಧುನಿಕ ಮಾದರಿಯ ಸೈಬರ್​ ದಾಳಿಯನ್ನು ವಾಟ್ಸ್​ಆ್ಯಪ್​ ಸಂಸ್ಥೆ ಪತ್ತೆ ಮಾಡಿದೆ. ಇದಕ್ಕೆ ಪರಿಹಾರ ಒದಗಿಸುವ ಸಾಫ್ಟ್​ವೇರ್​ ಅನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಕೂಡಲೇ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡಿಕೊಳ್ಳುವಂತೆ ಕಂಪನಿಯು ತನ್ನ 1.5 ಶತಕೋಟಿ ಬಳಕೆದಾರರಿಗೆ ಸೂಚಿಸಿದೆ.

ನವದೆಹಲಿ: ವಾಟ್ಸ್​ಆ್ಯಪ್​ ವಾಯ್ಸ್​ಕಾಲ್​ ಮೂಲಕ ಮಿಸ್ಡ್​ಕಾಲ್​ ಕೊಟ್ಟು ವೈರಸ್​ ಅನ್ನು ಬಿಡುಗಡೆ ಮಾಡುವ ಅತ್ಯಾಧುನಿಕ ಮಾದರಿಯ ಸೈಬರ್​ ದಾಳಿಯನ್ನು ವಾಟ್ಸ್​ಆ್ಯಪ್​ ಸಂಸ್ಥೆ ಪತ್ತೆ ಮಾಡಿದೆ. ಇದಕ್ಕೆ ಪರಿಹಾರ ಒದಗಿಸುವ ಸಾಫ್ಟ್​ವೇರ್​ ಅನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಕೂಡಲೇ ವಾಟ್ಸ್​ಆ್ಯಪ್​ ಅನ್ನು ಅಪ್ಡೇಟ್​ ಮಾಡಿಕೊಳ್ಳುವಂತೆ ಕಂಪನಿಯು ತನ್ನ 1.5 ಶತಕೋಟಿ ಬಳಕೆದಾರರಿಗೆ ಸೂಚಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸ್​ಆ್ಯಪ್​ ಸಂಸ್ಥೆಯ ವಕ್ತಾರ, ಈ ರೀತಿಯಾಗಿ ಸುಮಾರು ಬಳಕೆದಾರರ ಮೊಬೈಲ್​ ಫೋನ್​ಗಳು ಈ ವೈರಸ್​ನ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. ಈ ತಿಂಗಳ ಆರಂಭದಲ್ಲೇ ಈ ವಿಷಯ ಗೊತ್ತಾಯಿತು. ತಕ್ಷಣವೇ ಇದನ್ನು ಪರಿಹರಿಸುವ ಸಾಫ್ಟ್​ವೇರ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಯಿತು ಎಂದರು.

ಇಸ್ರೇಲ್​ನ ಎನ್​ಎಸ್​ಒ ಸಮೂಹ ಈ ವೈರಸ್​ ಬಿಡುಗಡೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ ಯಾವುದೇ ಸಂಸ್ಥೆಯ ಹೆಸರನ್ನು ಪ್ರಸ್ತಾಪಿಸದೆ ಪ್ರತಿಕ್ರಿಯಿಸಿರುವ ಸಿಟಿಜನ್​ ಲ್ಯಾಬ್​ ಎಂಬ ಸಂಸ್ಥೆಯ ಸಂಶೋಧಕ ಜಾನ್​ ಸ್ಕಾಟ್​ ರೇಲ್ಟನ್​, ನಿರ್ದಿಷ್ಟವಾಗಿ ಸರ್ಕಾರಿ ಸಂಸ್ಥೆಗಳಿಗಾಗಿ ಸ್ಪೈವೇರ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡುವ ಸಂಸ್ಥೆಯು ಮೊಬೈಲ್​ಫೋನ್​ನ ಆಪರೇಟಿಂಗ್​ ಸಿಸ್ಟಂ ಮೇಲೆ ಮೌನವಾಗಿ ಆಕ್ರಮಣ ಮಾಡುವ ಸಾಮರ್ಥ್ಯದ ವೈರಸ್​ ಅನ್ನು ಬಿಡುಗಡೆ ಮಾಡಿರಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)