ವಾಟ್ಸ್​ಆಪ್​ನಿಂದ ಗ್ರೂಪ್ ವಿಡಿಯೋ ಕರೆ

0
30

ವಾಟ್ಸ್​ಆಪ್ ಬಳಕೆದಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಗ್ರೂಪ್ ವಾಯ್್ಸ ಮತ್ತು ವಿಡಿಯೋ ಕರೆ ವೈಶಿಷ್ಟ್ಯವನ್ನು ಕಂಪನಿ ಪರಿಚಯಿಸಿದೆ. ಕರೆಗಳ ಮಧ್ಯೆಯೇ ಪರದೆ ಮೇಲೆ ‘ಆಡ್ ಪಾರ್ಟಿಸಿಪೆಂಟ್ ’

ನವದೆಹಲಿ: ವಾಟ್ಸ್​ಆಪ್ ಬಳಕೆದಾರರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಗ್ರೂಪ್ ವಾಯ್್ಸ ಮತ್ತು ವಿಡಿಯೋ ಕರೆ ವೈಶಿಷ್ಟ್ಯವನ್ನು ಕಂಪನಿ ಪರಿಚಯಿಸಿದೆ. ಕರೆಗಳ ಮಧ್ಯೆಯೇ ಪರದೆ ಮೇಲೆ ‘ಆಡ್ ಪಾರ್ಟಿಸಿಪೆಂಟ್ ’ಬಟನ್ ನೀಡಲಾಗಿದ್ದು, ಅದನ್ನು ಒತ್ತಿ ಫೋನ್ ಕಾಂಟ್ಯಾಕ್ಟ್​ನಲ್ಲಿರುವವರನ್ನು ಸೇರಿಸಿಕೊಳ್ಳಬಹುದು.ಒಂದು ಕರೆಗೆ ಗರಿಷ್ಠ 4 ಮಂದಿಯನ್ನು ಸೇರಿಸಲು ಅವಕಾಶ ನೀಡಲಾಗಿದೆ. ಮೊಬೈಲ್​ನಲ್ಲಿ ಆಪ್ ಅಪ್​ಡೇಟ್ ಮಾಡಿಕೊಳ್ಳುವ ಮೂಲಕ ಹೊಸ ಗ್ರೂಪ್ ಕರೆಯ ವೈಶಿಷ್ಟ್ಯ ಹೊಂದಬಹುದಾಗಿದೆ. ಪ್ರತಿ ದಿನ ವಾಟ್ಸ್​ಆಪ್ ಬಳಕೆದಾರರು 200 ಕೋಟಿ ನಿಮಿಷಗಳನ್ನು ಕರೆಗೆ ಬಳಸುತ್ತಿದ್ದಾರೆ ಎಂದು ಕಂಪನಿ ಹೇಳಿದೆ.