ವಾಟ್ಸಾಪ್‌ನ ಇಂಡಿಯಾ ಹೆಡ್‌ ಅಭಿಜಿತ್‌ ಬೋಸ್‌

0
504

ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆದ ವಾಟ್ಸಾಪ್‌, ಅಭಿಜಿತ್‌ ಬೋಸ್‌ ಅವರನ್ನು ಭಾರತೀಯ ವಿಭಾಗದ ಮುಖ್ಯಸ್ಥರನ್ನಾಗಿ ನವೆಂಬರ್ 21 ರ ಬುಧವಾರ ನೇಮಕ ಮಾಡಿದೆ.

ಹೊಸದಿಲ್ಲಿ: ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ಆದ ವಾಟ್ಸಾಪ್‌, ಅಭಿಜಿತ್‌ ಬೋಸ್‌ ಅವರನ್ನು ಭಾರತೀಯ ವಿಭಾಗದ ಮುಖ್ಯಸ್ಥರನ್ನಾಗಿ ನವೆಂಬರ್ 21 ರ ಬುಧವಾರ ನೇಮಕ ಮಾಡಿದೆ. 
ಕ್ಯಾಲಿಫೋರ್ನಿಯಾದ ಆಚೆಗೆ ವಾಟ್ಸಾಪ್‌ ತನ್ನ ಮೊದಲ ತಂಡವನ್ನು ಭಾರತದಲ್ಲಿ ರೂಪಿಸಲಿದೆ. ಗುರುಗ್ರಾಮದಲ್ಲಿ ಬೋಸ್‌ ನೇತೃತ್ವದಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸಲಿದ್ದು, ಗ್ರಾಹಕರನ್ನು ಬೆಸೆಯುವ ಮೂಲಕ ಸಣ್ಣ ಮತ್ತು ಬೃಹತ್‌ ಬ್ಯುಸಿನೆಸ್‌ಗೆ ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಮೂಲಕ ಸುಳ್ಳು ಮತ್ತು ದ್ವೇಷದ ಸುದ್ದಿಗಳು ಹರಿದಾಡಿ ಸಾಕಷ್ಟು ಅನಾಹುತಗಳು ಭಾರತದಲ್ಲಿ ಆಗಿವೆ. ”ಇವುಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ವಾಟ್ಸಾಪ್‌ ಗಮನಹರಿಸಬೇಕು. ಭಾರತದಲ್ಲಿ ಕುಂದುಕೊರತೆ ಸ್ವೀಕರಿಸಲು ವಿಶೇಷ ಅಧಿಕಾರಿಯನ್ನು ನೇಮಕ ಮಾಡಬೇಕು,” ಎಂದು ಭಾರತ ಸರಕಾರ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಧಿಕಾರಿಯ ನೇಮಕ ನಡೆದಿದ್ದು, ಈಗ ಭಾರತೀಯ ವಿಭಾಗದ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.