ವಾಜಪೇಯಿ ಪ್ರತ್ಯೇಕ ಸಮಾಧಿ, ಸ್ಮಾರಕಕ್ಕಾಗಿ ಯುಪಿಎ ನಿಯಮಾವಳಿ ರದ್ದು?

0
58

ಯುಪಿಎ ಸರಕಾರ 2013ರಲ್ಲಿ ಜಾರಿಗೆ ತಂದ ನಿಯಮವನ್ನು ರದ್ದುಪಡಿಸಿ, ಯಮುನಾ ನದಿ ತೀರದ ‘ಸ್ಮೃತಿ ಸ್ಥಳ’ದಲ್ಲಿ ವಾಜಪೇಯಿ ಅವರಿಗೆ ಪ್ರತ್ಯೇಕ ಸಮಾಧಿ ಮತ್ತು ಸ್ಮಾರಕ ನಿರ್ಮಿಸಲು ಎನ್‌ಡಿಎ ಸರಕಾರ ನಿರ್ಧರಿಸಿದೆ.

ಹೊಸದಿಲ್ಲಿ: ಯುಪಿಎ ಸರಕಾರ 2013ರಲ್ಲಿ ಜಾರಿಗೆ ತಂದ ನಿಯಮವನ್ನು ರದ್ದುಪಡಿಸಿ, ಯಮುನಾ ನದಿ ತೀರದ ‘ಸ್ಮೃತಿ ಸ್ಥಳ’ದಲ್ಲಿ ವಾಜಪೇಯಿ ಅವರಿಗೆ ಪ್ರತ್ಯೇಕ ಸಮಾಧಿ ಮತ್ತು ಸ್ಮಾರಕ ನಿರ್ಮಿಸಲು ಎನ್‌ಡಿಎ ಸರಕಾರ ನಿರ್ಧರಿಸಿದೆ. 

ದಿಲ್ಲಿಯಲ್ಲಿ ಸಮಾಧಿ ಮತ್ತು ಸ್ಮಾರಕ ನಿರ್ಮಾಣಕ್ಕೆ ಜಾಗದ ಕೊರತೆ ಹಿನ್ನೆಲೆಯಲ್ಲಿ, ಎಲ್ಲಾ ಮಾಜಿ ಪ್ರಧಾನಿಗಳಿಗೆ ‘ರಾಷ್ಟ್ರೀಯ ಸ್ಮೃತಿ’ ಹೆಸರಿನ ಒಂದೇ ಸ್ಮಾರಕ ನಿರ್ಮಿಸಲು ಯುಪಿಎ ಸರಕಾರ ನಿರ್ಧರಿಸಿತ್ತು. ಸ್ಮೃತಿ ಸ್ಥಳವು ಜವಾಹರ್‌ ಲಾಲ್‌ ನೆಹರೂ ಅವರ ಸ್ಮಾರಕ ‘ಶಾಂತಿವನ’ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಸ್ಮಾರಕ ‘ವಿಜಯ್‌ ಘಾಟ್‌’ ನಡುವೆ ಇದೆ. 2012ರಲ್ಲಿ ಮಾಜಿ ಪ್ರಧಾನಿ ಐ.ಕೆ. ಗುಜರಾಲ್‌ ಅವರ ಅಂತ್ಯ ಸಂಸ್ಕಾರವನ್ನು ‘ಸ್ಮೃತಿ ಸ್ಥಳ’ದಲ್ಲಿ ನೆರವೇರಿಸಲಾಗಿತ್ತು.