ವರ್ಷಾಂತ್ಯದ ಎಟಿಪಿ ರ‍್ಯಾಂಕಿಂಗ್: 5ನೇ ಬಾರಿ ನಡಾಲ್‌ಗೆ ಅಗ್ರಸ್ಥಾನ

0
7

ಸ್ಪೇನ್‌ನ ರಫೆಲ್‌ ನಡಾಲ್‌ ನವೆಂಬರ್ 18 ರ ಸೋಮವಾರ ಪ್ರಕಟಿಸಲಾದ ಎಟಿಪಿ ವರ್ಷಾಂತ್ಯದ ರ್‍ಯಾಂಕಿಂಗ್‌ನಲ್ಲಿ ಆಗ್ರಸ್ಥಾನಕ್ಕೆ ಏರಿದ್ದಾರೆ. ಅವರು 5ನೇ ಬಾರಿ ಅಗ್ರ ಕ್ರಮಾಂಕದೊಡನೆ ವರ್ಷ ಮುಗಿಸಿದ್ದಾರೆ.

ಪ್ಯಾರಿಸ್‌ (ಎಎಫ್‌ಪಿ): ಸ್ಪೇನ್‌ನ ರಫೆಲ್‌ ನಡಾಲ್‌  ನವೆಂಬರ್ 18 ರ  ಸೋಮವಾರ ಪ್ರಕಟಿಸಲಾದ ಎಟಿಪಿ ವರ್ಷಾಂತ್ಯದ ರ್‍ಯಾಂಕಿಂಗ್‌ನಲ್ಲಿ ಆಗ್ರಸ್ಥಾನಕ್ಕೆ ಏರಿದ್ದಾರೆ. ಅವರು 5ನೇ ಬಾರಿ ಅಗ್ರ ಕ್ರಮಾಂಕದೊಡನೆ ವರ್ಷ ಮುಗಿಸಿದ್ದಾರೆ.

ಲಂಡನ್‌ನಲ್ಲಿ ಕಳೆದ ವಾರ ನಡೆದ ಎಟಿಪಿ ಫೈನಲ್ಸ್‌ನಲ್ಲಿ ಅವರು ಗುಂಪು ಹಂತ ದಾಟಿರಲಿಲ್ಲ. ಆದರೆ ನೊವಾಕ್‌ ಜೊಕೊವಿಚ್‌ ಸೆಮಿಫೈನಲ್‌ ತಲುಪಲು ವಿಫಲರಾಗಿದ್ದರಿಂದ ನಡಾಲ್‌ 9,985 ಅಂಕಗಳೊಡನೆ ಅಗ್ರಸ್ಥಾನಕ್ಕೇರಲು ದಾರಿಯಾಯಿತು. ಅವರು ಗಳಿಸಿದ ಪಾಯಿಂಟ್ಸ್‌, ಸರ್ಬಿಯಾದ ಆಟಗಾರನಿಗಿಂತ 840 ಹೆಚ್ಚು.

ಜೊಕೊವಿಚ್‌ ಮತ್ತು ಫೆಡರರ್‌ ಕೂಡ ಐದು ಬಾರಿ ವರ್ಷವನ್ನು ಮೊದಲ ಕ್ರಮಾಂಕದಲ್ಲಿ ಮುಗಿಸಿದ್ದರು. ಈಗ ನಡಾಲ್‌ ಅವರ ದಾಖಲೆ ಸರಿಗಟ್ಟಿದಂತಾಗಿದೆ. ಅತ್ಯಧಿಕ ಆರು ಬಾರಿ ಅಗ್ರಸ್ಥಾನ ಪಡೆದ ಶ್ರೇಯ ಪೀಟ್‌ ಸಾಂಪ್ರಸ್‌ ಹೆಸರಿನಲ್ಲಿದೆ. 

ಮೊದಲ ಏಳು ಸ್ಥಾನ ಪಡೆದ ಆಟಗಾರರು: 1. ನಡಾಲ್‌ 2. ಜೊಕೊವಿಚ್‌ 3. ರೋಜರ್‌ ಫೆಡರರ್‌ 4. ಡೊಮಿನಿಕ್‌ ಥೀಮ್‌ 5. ಡೇನಿಯಲ್‌ ಮೆಡ್ವೆಡೇವ್‌ 6. ಸ್ಟೆಫಾನೊಸ್‌ ಸಿಸಿಪಸ್‌ 7. ಅಲೆಕ್ಜಾಂಡರ್‌ ಜ್ವೆರೆವ್‌.