ವರ್ಲ್ಡ್ ವೈಡ್ ವೆಬ್‌ಗೆ 30 ವರ್ಷ: ಗೂಗಲ್ ಡೂಡಲ್

0
389

ವರ್ಲ್ಡ್ ವೈಡ್ ವೆಬ್ ಅಸ್ತಿತ್ವಕ್ಕೆ ಬಂದು 30 ವರ್ಷವಾಗಿದ್ದಕ್ಕೆ ಗೂಗಲ್ ಸಂಸ್ಥೆ ಮಾರ್ಚ್ 12 ರ ಮಂಗಳವಾರ ಡೂಡಲ್ ಪ್ರಸ್ತುತಪಡಿಸಿದೆ.

ನವದೆಹಲಿ (ಪಿಟಿಐ): ವರ್ಲ್ಡ್ ವೈಡ್ ವೆಬ್ ಅಸ್ತಿತ್ವಕ್ಕೆ ಬಂದು 30 ವರ್ಷವಾಗಿದ್ದಕ್ಕೆ ಗೂಗಲ್ ಸಂಸ್ಥೆ  ಮಾರ್ಚ್ 12 ರ  ಮಂಗಳವಾರ ಡೂಡಲ್ ಪ್ರಸ್ತುತಪಡಿಸಿದೆ.

1989ರ ಮಾರ್ಚ್‌ 12ರಂದು ಸಾಫ್ಟ್‌ವೇರ್ ಎಂಜಿನಿಯರ್ ಸರ್ ಟಿಮ್ ಬರ್ನರ್ಸ್ ಲೀ ಅವರು ತಮ್ಮ ಬಾಸ್‌ಗೆ ‘ಮಾಹಿತಿ ನಿರ್ವಹಣೆ: ಒಂದು ಪ್ರಸ್ತಾವನೆ’ ಎನ್ನುವ ಯೋಜನೆ ನೀಡಿದರು. ಇದುವೇ ಬಳಿಕ ವರ್ಲ್ಡ್ ವೈಡ್ ವೆಬ್ ಎಂದು ಹೆಸರಾಯಿತು. 

‘ಕಂಪ್ಯೂಟರ್ ಭಾಷೆ ಎಚ್‌ಟಿಎಂಎಲ್‌, ಯುಆರ್‌ಎಲ್ ಅಡ್ರೆಸ್‌ಗಳು ಹಾಗೂ ಎಚ್‌ಟಿಟಿಪಿ (ಹೈಪರ್ ಟೆಕ್ಸ್ಟ್‌ ಪ್ರೊಟೊಕಾಲ್) ಬಳಸಿ ರೂಪಿಸಿರುವ ಅಂತರ್ಜಾಲದ ಅಪ್ಲಿಕೇಷನ್ ಅನ್ನು ವರ್ಲ್ಡ್ ವೈಡ್ ವೆಬ್‌ ಎನ್ನಲಾಗುತ್ತದೆ. ಇದಕ್ಕೂ ಅಂತರ್ಜಾಲಕ್ಕೂ ವ್ಯತ್ಯಾಸವಿದೆ. ವರ್ಲ್ಡ್‌ ವೈಡ್‌ ವೆಬ್ ಬಳಸಲು ಅಂತರ್ಜಾಲದ ಅವಶ್ಯಕತೆ ಇರುತ್ತದೆ’ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ.