ವರ್ಲ್ಡ್ ಚಾಲೆಂಜ್ ಕಪ್‌: ಚಿನ್ನ ಗೆದ್ದ ದೀಪಾ ಕರ್ಮಾಕರ್​

0
17

ಪ್ರತಿಷ್ಠಿತ ಏಷ್ಯನ್ ಗೇಮ್ಸ್​ನ ಸಿದ್ಧತೆಯಲ್ಲಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆಯುತ್ತಿರುವ ಎಫ್​ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.

ನವದೆಹಲಿ: ಪ್ರತಿಷ್ಠಿತ ಏಷ್ಯನ್ ಗೇಮ್ಸ್​ನ ಸಿದ್ಧತೆಯಲ್ಲಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆಯುತ್ತಿರುವ ಎಫ್​ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.

ರಿಯೋ ಒಲಿಂಪಿಕ್ಸ್ ಫೈನಲ್ಸ್​​ನಲ್ಲಿ 4ನೇ ಸ್ಥಾನ ಪಡೆದ ದೀಪಾಗೆ ಇದು ಮೊದಲ ವರ್ಲ್ಡ್ ಚಾಲೆಂಜ್ ಕಪ್ ಪದಕವಾಗಿದೆ. 24 ವರ್ಷದ ತ್ರಿಪುರಾದ ದೀಪಾ ವಾಲ್ಟ್​ ವಿಭಾಗದ ಫೈನಲ್ಸ್​ನಲ್ಲಿ ಒಟ್ಟು 14.150 ಪಾಯಿಂಟ್ ಸಂಪಾದಿಸುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು.

ರಿಯೋ ಒಲಿಂಪಿಕ್ಸ್ ಬಳಿಕ ದೀಪಾ ಮೊಣಕಾಲಿನ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಯಾವುದೇ ಅಂತಾರಾಷ್ಟ್ರೀಯ ಕೂಟದಲ್ಲಿ ಸ್ಪರ್ಧಿಸಿರಲಿಲ್ಲ. ಕಳೆದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಕನಸಿಗೆ ಗಾಯ ಅಡ್ಡಿಯಾಗಿತ್ತು. ಇದೀಗ ಏಷ್ಯನ್ ಗೇಮ್ಸ್‌ಗೆ ಪ್ರಕಟಿಸಲಾಗಿರುವ ಜಿಮ್ನಾಸ್ಟಿಕ್ಸ್ ತಂಡದಲ್ಲೂ ದೀಪಾ ಕರ್ಮಾಕರ್ ಸ್ಥಾನ ಪಡೆದಿರುವುದರಿಂದ ಈ ಪದಕ ಗೆಲುವು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. (ಏಜೆನ್ಸೀಸ್​)