ಲ್ಯಾನ್ಸ್‌ ನಾಯಕ್ ನಜೀರ್‌ ವಾನಿಗೆ “ಅಶೋಕ ಚಕ್ರ”

0
759

ಮೊದಲು ಭಯೋತ್ಪಾದಕನಾಗಿ, ನಂತರ ಪರಿವರ್ತನೆಗೊಂಡು ಸೇನೆಗೆ ಸೇರಿ ಹುತಾತ್ಮರಾಗಿದ್ದ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿ ’ಅಶೋಕ ಚಕ್ರ‘ ಘೋಷಿಸಲಾಗಿದೆ.

ನವದೆಹಲಿ (ಪಿಟಿಐ): ಮೊದಲು ಭಯೋತ್ಪಾದಕನಾಗಿ, ನಂತರ ಪರಿವರ್ತನೆಗೊಂಡು ಸೇನೆಗೆ ಸೇರಿ ಹುತಾತ್ಮರಾಗಿದ್ದ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿ ’ಅಶೋಕ ಚಕ್ರ‘ ಘೋಷಿಸಲಾಗಿದೆ. 

ವಾನಿ ಅವರು 2004ರಲ್ಲಿ ಮನ ಪರಿವರ್ತನೆಗೊಂಡು, ಭಾರತೀಯ ಸೇನೆ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಶೋಪಿಯಾನ್‌ ಜಿಲ್ಲೆಯ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕೆಚ್ಚೆದೆಯ ಹೋರಾಟವನ್ನು ನಡೆಸಿ, ಹುತಾತ್ಮರಾಗಿದ್ದರು.