ಲೋಕಪಾಲ ಸದಸ್ಯರ ಪದಗ್ರಹಣ

0
386

ಲೋಕಪಾಲ ಸಂಸ್ಥೆಗೆ ನೇಮಕಗೊಂಡಿರುವ ಎಂಟು ಮಂದಿ ಸದಸ್ಯರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನವದೆಹಲಿ(ಪಿಟಿಐ): ಲೋಕಪಾಲ ಸಂಸ್ಥೆಗೆ ನೇಮಕಗೊಂಡಿರುವ ಎಂಟು ಮಂದಿ ಸದಸ್ಯರು ಮಾರ್ಚ್ 27 ರ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

ನ್ಯಾಯಾಂಗ ಕ್ಷೇತ್ರದ ಸದಸ್ಯರಾಗಿ ನ್ಯಾಯಮೂರ್ತಿಗಳಾದ ದಿಲೀಪ್‌ ಬಿ. ಬೋಸ್ಲೆ, ಪ್ರದೀಪ್‌ ಕುಮಾರ್‌ ಮೊಹಾಂತಿ, ಅಭಿಲಾಷ ಕುಮಾರಿ, ಅಜಯ್‌ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಶಸ್ತ್ರ ಸೀಮಾ ಬಲದ (ಎಸ್‌ಎಸ್‌ಬಿ) ಮಾಜಿ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್‌ ಕುಮಾರ್‌ ಜೈನ್‌, ನಿವೃತ್ತ  ಅಧಿಕಾರಿಗಳಾದ ಮಹೇಂದ್ರ ಸಿಂಗ್‌ (ಐಆರ್‌ಎಸ್‌), ಇಂದ್ರಜಿತ್‌ ಪ್ರಸಾದ್‌ ಗೌತಮ್‌ (ಐಎಎಸ್‌) ನ್ಯಾಯಾಂಗೇತರ ಕ್ಷೇತ್ರದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ ಮಾರ್ಚ್ 23 ರ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.