ಲೈಫ್‌ಟೈಮ್‌ ಸಿಮ್‌ಗಳಿಗೂ ಮಾಸಿಕ ರಿಚಾರ್ಜ್‌ ಕಡ್ಡಾಯ

0
1101

ಜೀವಿತಾವಧಿಯುದ್ದಕ್ಕೂ ಒಳಬರುವ ಕರೆಗಳಿಗೆ ಅವಕಾಶವಿದೆ ಎಂದು ಬಿಂಬಿಸಲಾಗಿದ್ದ ಲೈಫ್‌ಟೈಮ್‌ ಸಿಮ್‌ಗಳು ಈಗ ಅರ್ಧ ದಾರಿಯಲ್ಲೇ ಎಕ್ಸ್‌ಪೈರ್‌ ಆಗುತ್ತಿವೆ. ಪ್ರೀಪೇಯ್ಡ್‌ ಲೈಫ್‌ಟೈಮ್‌ ಸಿಮ್‌ ಪಡೆದ ಗ್ರಾಹಕರು ಕಳೆದ ಒಂದೂವರೆ ತಿಂಗಳಿಂದ ಮೊಬೈಲ್‌ ದಿಢೀರ್‌ ಕರೆಗಳ ಸಂಪರ್ಕ ಕಡಿತದ ತೊಂದರೆ ಎದುರಿಸುತ್ತಿದ್ದಾರೆ. ತಿಂಗಳಿಗೊಮ್ಮೆ ರಿಚಾರ್ಜ್‌ ಮಾಡದೆ ಇದ್ದರೆ ಒಳಬರುವ ಕರೆಗಳೂ ಬಂದ್‌ ಅಗುತ್ತಿವೆ.

ಜೀವಿತಾವಧಿಯುದ್ದಕ್ಕೂ ಒಳಬರುವ ಕರೆಗಳಿಗೆ ಅವಕಾಶವಿದೆ ಎಂದು ಬಿಂಬಿಸಲಾಗಿದ್ದ ಲೈಫ್‌ಟೈಮ್‌ ಸಿಮ್‌ಗಳು ಈಗ ಅರ್ಧ ದಾರಿಯಲ್ಲೇ ಎಕ್ಸ್‌ಪೈರ್‌ ಆಗುತ್ತಿವೆ. ಪ್ರೀಪೇಯ್ಡ್‌ ಲೈಫ್‌ಟೈಮ್‌ ಸಿಮ್‌ ಪಡೆದ ಗ್ರಾಹಕರು ಕಳೆದ ಒಂದೂವರೆ ತಿಂಗಳಿಂದ ಮೊಬೈಲ್‌ ದಿಢೀರ್‌ ಕರೆಗಳ ಸಂಪರ್ಕ ಕಡಿತದ ತೊಂದರೆ ಎದುರಿಸುತ್ತಿದ್ದಾರೆ. ತಿಂಗಳಿಗೊಮ್ಮೆ ರಿಚಾರ್ಜ್‌ ಮಾಡದೆ ಇದ್ದರೆ ಒಳಬರುವ ಕರೆಗಳೂ ಬಂದ್‌ ಅಗುತ್ತಿವೆ. 

ಕಳೆದ ನವೆಂಬರ್‌ 26ರಿಂದ ಟ್ರಾಯ್‌, ಹೊಸ ನಿಯಮ ಜಾರಿಗೆ ತಂದಿದೆ ಎಂದು ಟೆಲಿಕಾಂ ಕಂಪನಿಗಳು ಹೇಳುತ್ತಿವೆ. ಜೀವಿತಾವಧಿ ಸಿಮ್‌ ಖರೀದಿ ಸಂದರ್ಭದಲ್ಲಿ ಮಾರಾಟ ಕಂಪನಿಗಳು ಸಿಮ್‌ ವ್ಯಾಲಿಡಿಟಿ ಅವಧಿ 2020, 2024ರ ವರೆಗೆ ಎಂದೆಲ್ಲ ಹೇಳಿ ನಂಬಿಸಿ 999, 1000 ರೂ. ಪಡೆದಿದ್ದವು. ಈಗ ಆ ಮಾತುಗಳನ್ನೆಲ್ಲ ಗಾಳಿಗೆ ತೂರಿವೆ ಎಂದು ಗ್ರಾಹಕರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
ನೇರ ನಗದು ವರ್ಗಾವಣೆ ಯೋಜನೆಯಡಿ ಮೊಬೈಲ್‌ ಸಂಖ್ಯೆಗಳನ್ನು ಗ್ಯಾಸ್‌ಬುಕ್ಕಿಂಗ್‌ ಸೇರಿದಂತೆ ವಿವಿಧ ಸರಕಾರಿ ಸವಲತ್ತು, ಸೇವೆಗಳನ್ನು ಪಡೆಯಲು ನಮ್ಮ ಮೊಬೈಲ್‌ ಸಂಖ್ಯೆಗಳನ್ನು ನೀಡಿದ್ದು, ಈಗ ದಿಢೀರನೇ ಮೊಬೈಲ್‌ ಕರೆಯ ಸಂಪರ್ಕ ಕಟ್‌ ಆದರೆ ಏನು ಮಾಡೋದು? ಇನ್ಮುಂದೆ ಪ್ರತೀ 28 ದಿನಗಳಿಗೊಮ್ಮೆ ಕನಿಷ್ಠ 35 ರೂ. ರೀಜಾರ್ಚ್‌ ಮಾಡಿಸಲೇಬೇಕು, ಇದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಹೊಸ ನಿಯಮ ಎಂದು ಟೆಲಿಕಾಂ ಕಂಪನಿಗಳವರು ನಿರ್ಬಂಧ ಹೇರುತ್ತಿರುವುದು ಸರಿಯಲ್ಲ ಎಂದು ಅವಲತ್ತುಕೊಳ್ಳುತ್ತಿದ್ದಾರೆ. 

ಏನಿದು ಲೈಫ್‌ಟೈಮ್‌ ಸಿಮ್‌? 
2006ರ ನಂತರ ದೇಶದಲ್ಲಿ ಲೈಫ್‌ಟೈಮ್‌ ವ್ಯಾಲಿಡಿಟಿ ಎನ್ನುವ ಹಣೆಪಟ್ಟಿಯೊಂದಿಗೆ ಅನೇಕ ಸಿಮ್‌ಕಾರ್ಡ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಆರಂಭಿಕ ರೀಚಾರ್ಜ್‌ 900ರಿಂದ 999ರೂ. ನೀಡಿ ಕೊಂಡಂತಹ ಸಿಮ್‌ಗಳಲ್ಲಿ 25ರಿಂದ 100ರವರೆಗೆ ಟಾಕ್‌ಟೈಮ್‌ನೊಂದಿಗೆ 20-25 ವರ್ಷಗಳ ಕಾಲ ಅನಿಯಮಿತ ಒಳಬರುವ ಕರೆಗೆ ಅವಕಾಶ ಕಲ್ಪಿಸಲಾಗಿತ್ತು. ಬಳಕೆದಾರರು ಅವರಿಗೆ ಇಷ್ಟ ಬಂದಾಗ ರೀಚಾರ್ಜ್‌ ಮಾಡಿಸಿಕೊಂಡು ಔಟ್‌ಗೋಯಿಂಗ್‌ ಕರೆಗಳನ್ನು ಬಳಸಿಕೊಳ್ಳಬಹುದಾಗಿತ್ತು. ಇದೀಗ ಈ ಆಫರ್‌ಗಳು ರದ್ದಾಗುವ ಹಂತ ತಲುಪಿದ್ದು, ಗ್ರಾಹಕರು ದಿಕ್ಕುದೋಚದಂತಾಗಿದ್ದಾರೆ. 

ಏಕೆ ಈ ನಿಯಮಗಳು? 
ಭರಪೂರ ಆಫರ್‌ನ ಜಿಯೋ ಸಿಮ್‌ಗಳು ಬಂದ ಮೇಲೆ ಗ್ರಾಹಕರು ಹೊರಹೋಗುವ ಕರೆ, ಇಂಟರ್‌ನೆಟ್‌ ಸೇವೆಗಾಗಿ ಅವನ್ನೇ ಪಡೆದು , ಮೊದಲಿದ್ದ ಬೇರೆ ಕಂಪನಿಗಳ ಸಿಮ್‌ಗಳನ್ನು ಬರೀ ಒಳಬರುವ ಕರೆಗೆ ಸೀಮಿತಗೊಳಿಸಿದ್ದು, ತಮಗಾಗುವ ನಷ್ಟ ತಪ್ಪಿಸಿಕೊಳ್ಳಲು ಟ್ರಾಯ್‌ ಮೊರೆ ಹೋಗಿ ಇಂತಹ ನಿಯಮ ಹೇರಿಕೆಗೆ ಕಾರಣವಾಗಿವೆ ಎಂದೇ ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತದೆ. ಏನೇ ಆಗಲಿ ಲೈಫ್‌ಟೈಮ್‌ ಸಿಮ್‌ಗಳು ಅವಧಿಗೆ ಮುಂಚೆಯೇ ದಿಢೀರ್‌ ರದ್ದಾಗುತ್ತಿರುವುದು ಗ್ರಾಹಕ ಹಕ್ಕು ಉಲ್ಲಂಘನೆಯೇ ಸರಿ. 

ಸಿಮ್‌ ಕೊಂಡ ಆರಂಭದಲ್ಲೇ 900ರೂ. ನೀಡಿರುವ ಬಳಕೆದಾರರಿಂದ ಈಗ ಪುನಃ ವ್ಯಾಲಿಡಿಟಿ ಹೆಸರಿನಲ್ಲಿ ಹಣ ಪೀಕುತ್ತಿರುವುದು ಖಂಡನೀಯ. ಒಂದು ಸಣ್ಣ ಸಂದೇಶ ಕಳಿಸಬೇಕಾದರೂ 35ರೂ. ಕನಿಷ್ಟ ರೀಚಾರ್ಜ್‌ ಮಾಡಿಸಬೇಕು ಎಂಬ ನಿಯಮಗಳು ಬಳಕೆದಾರರಿಗೆ ಮಾರಕವಾಗಿದೆ. 
-ಬದರೀನಾಥ್‌, ಬಳಕೆದಾರರ ಹಿತರಕ್ಷ ಣಾ ಟ್ರಸ್ಟ್‌, ದೊಡ್ಡಬಳ್ಳಾಪುರ 

ಲೈಫ್‌ಟೈಮ್‌ ವ್ಯಾಲಿಡಿಟಿ ಎಂದು ಹೇಳಿದ್ದ ಕೆಲ ಸಿಮ್‌ಕಾರ್ಡ್‌ ಆಪರೇಟರ್‌ಗಳಿಗೆ ಈಗಾಗಲೇ ಟ್ರಾಯ್‌ ಕಡೆಯಿಂದ ಮಾರ್ಗದರ್ಶನ ನೀಡಿದ್ದು, ಸೇವೆಯನ್ನು ಏಕಾಏಕಿ ಕಡಿತಗೊಳಿಸದಂತೆ ತಿಳಿಸಲಾಗಿದೆ. 28 ದಿನಗಳಲ್ಲಿ ರೀಚಾರ್ಜ್‌ ಮಾಡಿಸದಿದ್ದರೆ ಕರೆಗಳನ್ನು ನಿರ್ಬಂಧಿಸುತ್ತಿರುವ ನಿಯಮಕ್ಕೆ ಶೀಘ್ರದಲ್ಲೇ ಸಡಿಲಿಕೆ ಬರಲಿದೆ. 
– ಮುರುಳೀಧರ್‌, ರಾಜ್ಯ ಜಂಟಿ ಸಲಹೆಗಾರ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ