ಲೇಸರ್‌ ಭೌತಶಾಸ್ತ್ರದ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ

0
1492

ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ ಮೂವರು ಭೌತ ವಿಜ್ಞಾನಿಗಳಿಗೆ 2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸ್ಟಾಕ್​ಹೋಮ್:  ದಿ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಲೇಸರ್‌ ಭೌತಶಾಸ್ತ್ರದಲ್ಲಿನ ಅಧ್ಯಯನಕ್ಕೆ ಮೂವರು ಭೌತ ವಿಜ್ಞಾನಿಗಳಿಗೆ  2018 ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಮೆರಿಕದ ಅರ್ಥರ್‌ ಆಸ್ಕಿನ್‌, ಫ್ರಾನ್ಸ್‌ನ ಗೆರಾರ್ಡ್‌ ಮೌರೌ ಮತ್ತು ಕೆನಡಾದ ಡೊನ್ನ ಸ್ಟೀಕ್‌ಲ್ಯಾಂಡ್‌ ಅವರಿಗೆ 2018ನೇ ಸಾಲಿನ ಭೌತಶಾಸ್ತ್ರದ  ನೊಬೆಲ್‌ ಪ್ರಶಸ್ತಿ ಲಭ್ಯವಾಗಿದೆ.

ಆರ್ಥರ್ ಅಶ್ಕಿನ್ ಅವರು ಒಂಬತ್ತು ಮಿಲಿಯನ್ ಸ್ವೀಡಿಷ್ ಕ್ರೋನರ್(ಸುಮಾರು 7,34,10,896.10 ರೂ. ) ನಲ್ಲಿ ಅರ್ಧಭಾಗದ ನಗದು ಬಹುಮಾನ ಗೆದ್ದಿದ್ದರೆ, ಉಳಿದರ್ಧದಲ್ಲಿ ಫ್ರಾನ್ಸ್‌ನ ಗೆರಾರ್ಡ್ ಮೌರೌ ಮತ್ತು ಕೆನಡಾದ ಡೊನ್ನ ಸ್ಟ್ರಿಕ್ಲ್ಯಾಂಡ್ ಇತರ ಅರ್ಧ ಭಾಗವನ್ನು ಹಂಚಿಕೊಳ್ಳಲಿದ್ದಾರೆ.

 
ಅತಿ ಸಣ್ಣ ಮತ್ತು ಸೂಕ್ಷ್ಮಾಣು ಲೇಸರ್ ತಂತ್ರಜ್ಞಾನದ ಅಭಿವೃದ್ಧಿಯ ಸಾಧನೆಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದ್ದು. ಈ ಲೇಸರ್ ತಂತ್ರಜ್ಞಾನವು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಹೆಚ್ಚು ಉಪಯುಕ್ತವಾಗಿದೆ.