ಲೇಖಕ ಅರುಣ ಸಾಧು ನಿಧನ

0
15

ಹೆಸರಾಂತ ಪತ್ರಕರ್ತ ಹಾಗೂ ಲೇಖಕ ಅರುಣ್ ಸಾಧು (76) ಅವರು ಮುಂಬೈನ ಸಿಯೊನ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸೋಮವಾರ ಕೊನೆಯುಸಿರೆಳೆದಿದ್ದಾರೆ.

ಲೇಖಕ ಹಾಗೂ ಪತ್ರಕರ್ತ ಅರುಣಾ ಸಾಧು ಅವರು ನಿಧನರಾಗಿದ್ದಾರೆ. ’ಮುಂಬೈ ದಿನಾಂಕ್’ ಅರುಣ್ ಅವರ ಮೊದಲ ಕಾದಂಬರಿ. ’ಸಿಂಹಾಸನ’ ಎಂಬ ಕೃತಿಯು ಮರಾಠಿಯಲ್ಲಿ ಚಲನಚಿತ್ರವಾಗಿ ತೆರೆಕಂಡಿತ್ತು.

ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಅರುಣ್ ಅವರು ಹಿಂದಿ, ಇಂಗ್ಲಿಷ್ ಹಾಗೂ ಮರಾಠಿಯಲ್ಲಿ ಕಾದಂಬರಿ, ಸಣ್ಣಕತೆಗಳನ್ನು ರಚಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಶಿವಸೇನಾ ಬೆಳವಣಿಗೆ, ವಿಯೆಟ್ನಾಂ ಯುದ್ಧ ಹಾಗೂ ಚೀನಾ ಕ್ರಾಂತಿ ಕುರಿತು ಬರೆದಿದ್ದಾರೆ.