ಲಿಯಾನ್ ಗೆ ಒಲಿದ ಮಿಸ್ ವರ್ಲ್ಡ್ 2018 ಕಿರೀಟ

0
1376

ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ 2018 ರ ಬಾರಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿ ಪಡೆದಿದ್ದ ಭಾರತದ ಮಾನುಷಿ ಚಿಲ್ಲರ್, ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು.

ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಈ ಬಾರಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕಳೆದವರ್ಷ ಈ ಪ್ರಶಸ್ತಿ ಪಡೆದಿದ್ದ ಭಾರತದ ಮಾನುಷಿ ಚಿಲ್ಲರ್, ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು.

ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಕಿರೀಟವನ್ನು 26 ವರ್ಷದ ಚೆಲುವೆ ವನೆಸ್ಸಾ ಪೊನ್ಸ್ ಡೆ ಲಿಯಾನ್ ತಲೆಗೆ ತೊಡಿಸಿದಾಗ ಸಂತೋಷದಲ್ಲಿ ತೇಲಾಡಿದ ಲಿಯಾನ್, ಭಾರತೀಯ ಸಂಪ್ರದಾಯದಂತೆ ನಮಸ್ತೆ ಎಂದು ಹೇಳಿದರು.

ಕಳೆದ ಬಾರಿ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದ ಭಾರತದ ಮಾನುಷಿ ಛಿಲ್ಲರ್ ಶನಿವಾರ ಮೆಕ್ಸಿಕೊದ ವನೆಸ್ಸಾ ಪೊನ್ಸ್ ಡಿ ಲಿಯಾನ್‌ ಅವರಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. ಮೊದಲ ರನ್ನರ್ ಅಪ್ ಶ್ರೇಯ ಥಾಯ್ಲೆಂಡ್‌ ಪಾಲಾದರೆ ಮಿಸ್ ಇಂಡಿಯಾ ಅನುಕೀರ್ತಿ ವಾಸ್ ಅವರಿಗೆ ಮೊದಲ 30 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮಾತ್ರ ಸಾಧ್ಯವಾಯಿತು. ಬೆಲರುಸ್, ಜಮೈಕಾ ಮತ್ತು ಉಗಾಂಡಾದ ಸುಂದರಿಯರು ನಂತರದ ಸ್ಥಾನ ಗಳಿಸಿದರು.

ವನೆಸ್ಸಾ ಅವರ ಬಗ್ಗೆ:-

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪದವಿ ಪಡೆದಿರುವ ವನೆಸ್ಸಾ ಪ್ರಸ್ತುತ ಬಾಲಕಿಯರ ಪುನರ್ವಸತಿ ಕೇಂದ್ರವೊಂದರ ನಿರ್ದೇಶಕಿಯಾಗಿದ್ದಾರೆ. ವಲಸಿಗರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುವ ‘ಮೈಗ್ರೆಂಟ್ಸ್ ಎನ್‌ ಎಲ್ ಕಾಮಿನೊ’ ಸಂಸ್ಥೆಯಲ್ಲಿ ಸ್ವಯಂಸೇವಕಿಯಾಗಿ ದುಡಿಯುತ್ತಿದ್ದಾರೆ. ವೃತ್ತಿಪರ ಮಾಡೆಲ್ ಮತ್ತು ನಿರೂಪಕಿಯಾಗಿರುವ ವನೆಸ್ಸಾ ರಾಷ್ಟ್ರೀಯ ಯುವ ಸಂಸ್ಥೆಯಲ್ಲಿ ಉಪನ್ಯಾಸಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹವ್ಯಾಸಗಳು:-

ಸಾಹಸ ಕ್ರೀಡೆಗಳು, ಸ್ಕೂಬಾ ಡೈವಿಂಗ್, ವಾಲೀಬಾಲ್, ಚಿತ್ರಕಲೆಯಲ್ಲಿ ಅವರಿಗೆ ಆಸಕ್ತಿ ಇದೆ. ಮುಕ್ತ ಮಾತುಕತೆ, ತಿರುಗಾಟ ನನಗೆ ಅಚ್ಚುಮೆಚ್ಚು ಎಂದು ಅವರು ಹೇಳಿಕೊಳ್ಳುತ್ತಾರೆ.