ಲಾಲ ಲಜ್ಪತ್ ರಾಯ್ ಅವರ 152 ನೇ ಜನ್ಮವಾರ್ಷಿಕೋತ್ಸವ

0
47

ಜ.28 ರಂದು ದೇಶಾದ್ಯಂತ ಲಾಲ ಲಜ್ಪತ್ ರಾಯ್ ಅವರ 152 ನೇ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಲಾಲ ಲಜ್ಪತ್ ರಾಯ್ ಅವರನ್ನು ಸ್ಮರಿಸಿದ್ದು, ಗೌರವ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟ ಧೀಮಂತ ನಾಯಕ ಲಾಲ ಲಜ್ಪತ್ ರಾಯ್ ಎಂದು ಪ್ರಧಾನಿ ಹೇಳಿದ್ದು, ಪಂಜಾಬ್ ಕೇಸರಿ ಲಾಲ ಲಜ್ಪತ್ ರಾಯ್ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಬಿಟ್ಟು ಹೋಗಿದ್ದಾರೆ. ಲಜ್ಪತ್ ರಾಯ್ ಅವರನ್ನು ನಾವು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟ ಧೀಮಂತ ನಾಯಕ ಎಂದು ಸ್ಮರಿಸುತ್ತೇವೆ, ಅವರ 152 ನೇ ಜನ್ಮ ವಾರ್ಷಿಕೋತ್ಸವದ ದಿನದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 
 
ಪಂಜಾಬ್ ನ ಮೋಗ ಜಿಲ್ಲೆಯಲ್ಲಿ ಲಾಲ ಲಜ್ಪತ್ ರಾಯ್ ಅವರು 1865 ರ ಜ.28 ರಂದು ಜನಿಸಿದ್ದರು.