ರೈಲ್ವೆ ಕೇಟರಿಂಗ್‌ ಸೇವೆಗೆ : ಶೇ 5 ರಷ್ಟು ಜಿಎಸ್‌ಟಿ

0
32

ರೈಲ್ವೆ ಕೇಟರಿಂಗ್‌ ಸೇವೆಗೆ ಶೇ 5 ರಷ್ಟು ಜಿಎಸ್‌ಟಿ ತೆರಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ನವದೆಹಲಿ : ರೈಲ್ವೆ ಕೇಟರಿಂಗ್‌ ಸೇವೆಗೆ ಶೇ 5 ರಷ್ಟು ಜಿಎಸ್‌ಟಿ ತೆರಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ರೈಲು, ಪ್ಲಾಟ್‌ಫಾರಂ ಅಥವಾ ನಿಲ್ದಾಣದಲ್ಲಿ ಮಾರಾಟ ಮಾಡುವ ಆಹಾರ ಮತ್ತು ಪಾನೀಯಗಳಿಗೆ ಈ ತೆರಿಗೆ ಅನ್ವಯವಾಗಲಿದೆ. ಹಣಕಾಸು ಸಚಿವಾಲಯವು ರೈಲ್ವೆ ಮಂಡಳಿಗೆ ಪತ್ರ ಬರೆಯುವ ಮೂಲಕ ತೆರಿಗೆ ಬಗ್ಗೆ ಇದ್ದ  ಅನಿಶ್ಚಿತತೆ ದೂರ ಮಾಡಿದೆ.

ಭಾರತೀಯ ರೈಲ್ವೆ ಅಥವಾ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸ ನಿಗಮವು ಪೂರೈಸುವ ಆಹಾರ ಮತ್ತು ಪಾನೀಯಗಳಿಗೆ ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌ ಇಲ್ಲದೆ ಶೇ 5 ರಷ್ಟು ಜಿಎಸ್‌ಟಿ ಪಾವತಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.