ರೈಲು ಪ್ರಯಾಣಕ್ಕೆ ಉಚಿತ ವಿಮೆ ಇಲ್ಲ

0
37

ಭಾರತೀಯ ರೈಲ್ವೆಯು ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು
ಆಗಸ್ಟ್ 11ರ ಶನಿವಾರ ತಿಳಿಸಿದೆ.

ಮುಂಬಯಿ: ಭಾರತೀಯ ರೈಲ್ವೆಯು ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು  ಆಗಸ್ಟ್ 11ರ ಶನಿವಾರ ತಿಳಿಸಿದೆ. 

ಐಆರ್‌ಸಿಟಿಸಿಯ ಹಿರಿಯ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಸೆಪ್ಟೆಂಬರ್‌ 1ರಿಂದ ಪ್ರಯಾಣಕ್ಕೆ ಉಚಿತ ವಿಮೆ ಸ್ಥಗಿತಗೊಳಿಸಲಾಗುವುದು. ಹಾಗೂ ಉಚಿತ ವಿಮೆಯು ಐಚ್ಛಿಕ ಆಗಿರಲಿದೆ ಎಂದರು. 

ಪ್ರಯಾಣಿಕರು ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಟಿಕೆಟ್‌ ಬುಕ್‌ ಮಾಡುವ ಸಂದರ್ಭ ಉಚಿತ ಪ್ರಯಾಣ ವಿಮೆಯನ್ನು ಪಡೆದುಕೊಳ್ಳಬಹುದು ಅಥವಾ ಪಡೆಯದಿರಲು ಆಯ್ಕೆ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರೈಲು ಪ್ರಯಾಣದ ವೇಳೆ ಪ್ರಯಾಣಿಕ ಮೃತಪಟ್ಟರೆ 10 ಲಕ್ಷ ರೂ. ಗರಿಷ್ಠ ಪರಿಹಾರ ಹಾಗೂ ಅಪಘಾತದಿಂದ ವಿಕಲ ಚೇತನರಾದರೆ 7.5 ಲಕ್ಷ ರೂ, ಗಾಯವಾದರೆ 2 ಲಕ್ಷ ರೂ. ವಿಮೆ ಪರಿಹಾರ ಸಿಗುತ್ತದೆ.