ರೈಲಿನ ಮೂಲಕ ‘ರಾಮಾಯಣ ದರ್ಶನ’

0
26

ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ನವದೆಹಲಿ: ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ ಕೋಲೊಂಬೊವರೆಗೆ 16 ದಿನಗಳ ಪ್ರಯಾಣದಲ್ಲಿ ಈ ಸ್ಥಳಗಳ ದರ್ಶನ ಭಾಗ್ಯ ಪ್ರಯಾಣಿಕರಿಗೆ ಸಿಗಲಿದೆ. ‘ಶ್ರೀ ರಾಮಾಯಣ ದರ್ಶನಂ’ ಎಂದು ರೈಲಿಗೆ ನಾಮಕರಣ ಮಾಡಲಾಗಿದ್ದು, ನವೆಂಬರ್ 14ರಂದು ಇದಕ್ಕೆ ಚಾಲನೆ ದೊರೆಯಲಿದೆ.

800 ಪ್ರಯಾಣಿಕರು ಒಟ್ಟಿಗೆ ಈ ರೈಲಿನಲ್ಲಿ ಪ್ರಯಾಣಿಸಬಹುದು. ಪ್ರತಿಯೊಬ್ಬರಿಗೆ 15,120 ರೂ. (ಭಾರತದ ಪ್ರವಾಸಕ್ಕೆ ಮಾತ್ರ) ದರ ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಊಟದ ವ್ಯವಸ್ಥೆ, ವಸತಿ, ಸ್ಥಳ ವೀಕ್ಷಣೆ ಎಲ್ಲವನ್ನೂ ಒಳಗೊಂಡಿದೆ. ರೈಲು ನಿಲ್ದಾಣದಿಂದ ಪ್ರತಿಯೊಂದು ಸ್ಥಳಕ್ಕೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಂಪಿಗೂ ಬರಲಿಗೆ ರೈಲು

ದೆಹಲಿಯ ಸ್ದರ್‌ಜಂಗ್ ಸ್ಟೇಷನ್‌ನಿಂದ ಪ್ರಯಾಣ ಆರಂಭವಾಗಲಿದ್ದು, ರಾಮನ ಜನ್ಮಭೂಮಿಯಾಗಿರುವ ಅಯೋಧ್ಯೆಯಲ್ಲಿ ಮೊದಲ ನಿಲುಗಡೆ ಇರಲಿದೆ. ಅಲ್ಲಿಂದ ರೈಲು ನಂದಿಗ್ರಾಮ, ಸೀತಾ ಮಹ್ರಿ, ಜನಕಪರ್​, ವಾರಾಣಸಿ, ಪ್ರಯಾಗ, ಶ್ರಂಗವೀರ್​ಪುರ್​, ಚಿತ್ರಕೂಟ, ನಾಸಿಕ್​, ಹಂಪಿ ಮತ್ತು ರಾಮೇಶ್ವರಂಗೆ ತಲುಪಲಿದೆ.

ಶ್ರೀಲಂಕಾದಲ್ಲಿರುವ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ಇರುವವರನ್ನು ರೈಲ್ವೆ ಇಲಾಖೆ ಚೆನ್ನೈನಿಂದ ಶ್ರೀಲಂಕಾಗೆ ಕರೆದೊಯ್ದು, ರಂಬೋಡಾ, ನುವಾರಾ ಎಲಿಯಾ ಮತ್ತು ಚಿಲಾವ್​ ಸ್ಥಳಗಳ ದರ್ಶನ ಮಾಡಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸಿಸ್​)