ರೈತರಿಗೆ ಧನಸಹಾಯ ನೀಡುವಲ್ಲಿ ಕೇಂದ್ರದೊಂದಿಗೆ ಪೈಪೋಟಿಗಿಳಿದ ಆಂಧ್ರ ಸರ್ಕಾರ

0
505

ರೈತರಿಗೆ ಧನಸಹಾಯ ಒದಗಿಸುವ ವಿಷಯದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದೊಂದಿಗೆ ಪೈಪೋಟಿಗಿಳಿದಿದ್ದಾರೆ. ಆಂಧ್ರದಲ್ಲಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ರಾಜ್ಯ ಸರ್ಕಾರ 9 ಸಾವಿರ ರೂ. ಧನಸಹಾಯ ಒದಗಿಸಲಿದೆ. ಕೇಂದ್ರ ಸರ್ಕಾರ ಘೋಷಿಸಿರುವ 6 ಸಾವಿರ ರೂ. ಧನಸಹಾಯದೊಂದಿಗೆ ಹೆಚ್ಚುವರಿಯಾಗಿ ಈ ಧನಸಹಾಯ ಲಭಿಸಲಿದೆ.

ಅಮರಾವತಿ: ರೈತರಿಗೆ ಧನಸಹಾಯ ಒದಗಿಸುವ ವಿಷಯದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದೊಂದಿಗೆ ಪೈಪೋಟಿಗಿಳಿದಿದ್ದಾರೆ. ಆಂಧ್ರದಲ್ಲಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ರಾಜ್ಯ ಸರ್ಕಾರ 9 ಸಾವಿರ ರೂ. ಧನಸಹಾಯ ಒದಗಿಸಲಿದೆ. ಕೇಂದ್ರ ಸರ್ಕಾರ ಘೋಷಿಸಿರುವ 6 ಸಾವಿರ ರೂ. ಧನಸಹಾಯದೊಂದಿಗೆ ಹೆಚ್ಚುವರಿಯಾಗಿ ಈ ಧನಸಹಾಯ ಲಭಿಸಲಿದೆ.

ಇದೇ ವೇಳೆ 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರಿಗೆ ಆಂಧ್ರ ಸರ್ಕಾರ 10 ಸಾವಿರ ರೂ. ಧನಸಹಾಯ ನೀಡಲಿದೆ. ಆದರೆ ಕೇಂದ್ರ ಸರ್ಕಾರ 5 ಎಕರೆಗಿಂತ ಹೆಚ್ಚುಭೂಮಿ ಹೊಂದಿರುವ ರೈತರಿಗೆ ಯಾವುದೇ ಧನಸಹಾಯ ಒದಗಿಸುತ್ತಿಲ್ಲ.

ಅನ್ನದಾತ ಸುಖೀಭವ ಯೋಜನೆ 2019ರ ಅಡಿಯಲ್ಲಿ ಈ ಧನಸಹಾಯ ಒದಗಿಸುವುದಾಗಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. (ಏಜೆನ್ಸೀಸ್​)