ರಿಸರ್ವ್‌ ಬ್ಯಾಂಕ್‌ ಸ್ವಾಯತ್ತತೆ ‘ಐಎಂಎಫ್‌’ ಬೆಂಬಲ

0
256

ವಿಶ್ವದ ಯಾವುದೇ ಭಾಗದಲ್ಲಿ ಕೇಂದ್ರೀಯ ಬ್ಯಾಂಕ್‌ಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿ
ದಂತೆ ರಾಜಿಮಾಡಿಕೊಳ್ಳುವ ಪ್ರಯತ್ನಗಳನ್ನು ತಾನು ಬಲವಾಗಿ ವಿರೋಧಿಸುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಿಳಿಸಿದೆ.

ವಾಷಿಂಗ್ಟನ್‌ (ಪಿಟಿಐ): ವಿಶ್ವದ ಯಾವುದೇ ಭಾಗದಲ್ಲಿ ಕೇಂದ್ರೀಯ ಬ್ಯಾಂಕ್‌ಗಳ ಸ್ವಾತಂತ್ರ್ಯಕ್ಕೆ ಸಂಬಂಧಿಸಿ
ದಂತೆ ರಾಜಿಮಾಡಿಕೊಳ್ಳುವ   ಪ್ರಯತ್ನಗಳನ್ನು ತಾನು ಬಲವಾಗಿ ವಿರೋಧಿಸುವುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಿಳಿಸಿದೆ.

 ಸ್ವಾಯತ್ತತೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರ ಮಧ್ಯೆ ಜಟಾಪಟಿ ನಡೆ
ಯುತ್ತಿದೆ. ಈ ಬೆಳವಣಿಗೆಗೆ ಐಎಂಎಫ್‌ ಪ್ರತಿಕ್ರಿಯಿಸಿ ಆರ್‌ಬಿಐನ ಬೆಂಬಲಕ್ಕೆ ನಿಂತಿದೆ.‘ಈ ವಿದ್ಯಮಾನದ ಮೇಲೆ ನಾವು ನಿರಂತರವಾಗಿ ನಿಗಾ ಇರಿಸಿದ್ದೇವೆ. ಮುಂದೆಯೂ ಈ ಬಗ್ಗೆ ಗಮನ ಹರಿಸಲಿದ್ದೇವೆ’ ಎಂದು ಐಎಂಎಫ್‌ನ ಸಂವಹನ ನಿರ್ದೇಶಕ ಗೆರ್ರಿ ರೈಸ್‌ ಅವರು ಹೇಳಿದ್ದಾರೆ.

ಹಣಕಾಸು ಮಾರುಕಟ್ಟೆಯ ನಿಯಂತ್ರಕ ಮತ್ತು ಕೇಂದ್ರೀಯ ಬ್ಯಾಂಕ್‌ನ ಸ್ವತಂತ್ರ ಕಾರ್ಯನಿರ್ವಹಣೆಯಲ್ಲಿ ಯಾವುದೇ ಸರ್ಕಾರ ಅಥವಾ ಉದ್ದಿಮೆಯು ಮಧ್ಯಪ್ರವೇಶ ಮಾಡದಿರುವ ಸತ್ಸ ಸಂಪ್ರದಾಯವನ್ನು ಎಲ್ಲೆಡೆ ಪಾಲಿಸಿ
ಕೊಂಡು ಬರಲಾಗುತ್ತಿದೆ ’ ಎಂದರು.

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯನ್ನು ಅಧಿಕಾರಸ್ಥರು ಕಟುವಾಗಿ ಟೀಕಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಅಮೆರಿಕದ ಫೆಡರಲ್‌ ರಿಸರ್ವ್‌ನ ನಿಲುವನ್ನು ಟೀಕಿಸಿದ್ದರು.