ರಿಲಯನ್ಸ್‌ಗೆ ಎರಡನೇ ತ್ರೈಮಾಸಿಕದಲ್ಲಿ 9,516 ಕೋಟಿ ರೂ. ಲಾಭ

0
329

ಜುಲೈ – ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ ( ಆರ್‌ಐಎಲ್‌ ) ನಿವ್ವಳ ಲಾಭವು ಶೇ. 17.4 ಏರಿಕೆಯಾಗಿದ್ದು,9,516 ಕೋಟಿ ರೂ. ಮುಟ್ಟಿದೆ. ಇದು ಕಂಪನಿಯ ಸಾರ್ವಕಾಲಿಕ ದಾಖಲೆ.

ಹೊಸದಿಲ್ಲಿ: ಜುಲೈ – ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ  ರಿಲಯನ್ಸ್ ಇಂಡಸ್ಟ್ರೀಸ್‌ ( ಆರ್‌ಐಎಲ್‌ ) ನಿವ್ವಳ ಲಾಭವು ಶೇ. 17.4 ಏರಿಕೆಯಾಗಿದ್ದು,9,516 ಕೋಟಿ ರೂ. ಮುಟ್ಟಿದೆ. ಇದು ಕಂಪನಿಯ ಸಾರ್ವಕಾಲಿಕ ದಾಖಲೆ. 

ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ 8,109 ಕೋಟಿ ರೂ. ಲಾಭವಾಗಿತ್ತು. ಪೆಟ್ರೋಕೆಮಿಕಲ್ ಬ್ಯುಸಿನೆಸ್, ರೀಟೇಲ್‌ ವ್ಯವಹಾರ ಮತ್ತು ಜಿಯೊದ ಟೆಲಿಕಾಂ ವ್ಯವಹಾರದಿಂದಾಗಿ ಆರ್‌ಐಎಲ್‌ ಲಾಭ ಗಣನೀಯವಾಗಿ ಏರಿಕೆಯಾಗಿದೆ. ಆರ್‌ಐಎಲ್‌ನ ಆದಾಯ ಶೇ. 54.5 ವೃದ್ಧಿಯಾಗಿದ್ದು, 1.56 ಲಕ್ಷ ಕೋಟಿ ರೂ. ಮುಟ್ಟಿದೆ. ಈ ಸಮೂಹದ ರಿಲಯನ್ಸ್ ಜಿಯೊ 681 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 11. 3 ರಷ್ಟು ವೃದ್ಧಿಯಾಗಿದೆ. ರೀಟೇಲ್‌ ಬ್ಯುಸಿನೆಸ್‌ ನಿವ್ವಳ ಲಾಭವು ಶೇ. 213 ರಷ್ಟು ವೃದ್ಧಿಸಿದ್ದು, 1,392 ಕೋಟಿ ರೂ. ಮುಟ್ಟಿದೆ. 

ಇಂಧನದಿಂದ ಟೆಲಿಕಾಂ ತನಕ ನಾನಾ ಉದ್ಯಮಗಳನ್ನು ಹೊಂದಿರುವ ಆರ್‌ಐಎಲ್‌, ಈಗ ಡೆನ್‌ ನೆಟ್‌ವರ್ಕ್ ಲಿಮಿಟೆಡ್‌ ಮತ್ತು ಹಾಥ್‌ ವೇ ಕೇಬಲ್‌, ಡೇಟಾ ಕಾಮ್‌ ಕಂಪನಿಗಳಲ್ಲಿ ಹೆಚ್ಚಿನ ಪಾಲುದಾರಿಕೆ ಪಡೆಯುವುದಾಗಿ ಘೋಷಿಸಿದೆ. 5,230 ಕೋಟಿ ರೂ. ಗಳ ಈ ವ್ಯವಹಾರದಿಂದ ಕಂಪನಿಯ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್‌ ಸೇವೆಗಳು ಮತ್ತು ಅಲ್ಟ್ರಾ ಹೈ ಡೆಫಿನಿಶನ್ ಮಟ್ಟದ ಮನರಂಜನೆಯನ್ನು ದೊಡ್ಡ ಟಿ.ವಿ. ಪರದೆ ಮೇಲೆ ನೀಡುವ ಸಾಮರ್ಥ್ಯವು ಇನ್ನಷ್ಟು ಹೆಚ್ಚಲಿದೆ.