ರಾಹುಲ್ ದ್ರಾವಿಡ್‌ಗೆ ಐಸಿಸಿ ‘ಹಾಲ್ ಆಫ್ ಫೇಮ್’ ಗೌರವ

0
415

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತಡೆಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ‘ಹಾಲ್ ಆಫ್ ಫೇಮ್’ ಗೌರವವನ್ನು ಪಡೆದಿದ್ದಾರೆ.

ತಿರುವನಂತಪುರ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ತಡೆಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ‘ಹಾಲ್ ಆಫ್ ಫೇಮ್’ ಗೌರವವನ್ನು ಪಡೆದಿದ್ದಾರೆ.

ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ ಐದನೇ ಏಕದಿನ ಪಂದ್ಯದ ವೇಳೆ ರಾಹುಲ್ ದ್ರಾವಿಡ್ ಅವರಿಗೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ‘ಹಾಲ್ ಆಫ್ ಫೇಮ್’ ಸ್ಮರಣಿಕೆ ನೀಡಿ ಗೌರವಿಸಿದರು. 

ಈ ಮೂಲಕಐಸಿಸಿ ಹಾಲ್ ಆಫ್ ಫೇಮ್ ಕೀರ್ತಿಗೆ ಪಾತ್ರರಾದ ಐದನೇ ಭಾರತೀಯ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. 

ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದ ಭಾರತೀಯರು: 

1. ಬಿಷನ್ ಸಿಂಗ್ ಬೇಡಿ, 
2. ಸುನಿಲ್ ಗವಾಸ್ಕರ್, 
3. ಕಪಿಲ್ ದೇವ್, 
4. ಅನಿಲ್ ಕುಂಬ್ಳೆ, 
5. ರಾಹುಲ್ ದ್ರಾವಿಡ್. 

ಬಳಿಕ ತಮ್ಮ ಸಂದೇಶದಲ್ಲಿ ಮಾತನಾಡುತ್ತಾ ದ್ರಾವಿಡ್, ಐಸಿಸಿ ಹಾಲ್ ಆಫ್ ಫೇಮ್ ಎಲೈಟ್ ಪಟ್ಟಿಗೆ ಸೇರಿರುವುದಕ್ಕೆಅತೀತ ಸಂತಸ ವ್ಯಕ್ತಪಡಿಸಿದರು. “ಇದು ತಮಗೆ ದೊರಕಿರುವ ಅತಿ ದೊಡ್ಡ ಗೌರವ ಎಂದು ಕೃತಜ್ಞತೆ ಸಲ್ಲಿಸಿರುವ ದ್ರಾವಿಡ್, ತಮ್ಮ ಹೀರೊಗಳ ಜೊತೆಗೆ ಗುರುತಿಸಿರುವುದೇ ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ” ಎಂದು ನುಡಿದರು.