ರಾಸಾಯನಿಕ ಅಸ್ತ್ರ ಪತ್ತೆಗೆ ಸ್ಟ್ಯಾಂಪ್ ಗಾತ್ರದ ಸೆನ್ಸರ್

0
237

ಯುದ್ಧಭೂಮಿಯಲ್ಲಿ ರಾಸಾಯನಿಕ ಅಸ್ತ್ರಗಳ ದಾಳಿಗೆ ಬಳಸುವ ಸರಿನ್‌ ಸೇರಿದಂತೆ ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚುವ ಸಾಮರ್ಥ್ಯವುಳ್ಳ ಸ್ಟ್ಯಾಂಪ್ ಗಾತ್ರದ ಸೆನ್ಸರ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ವಾಷಿಂಗ್ಟನ್ (ಪಿಟಿಐ): ಯುದ್ಧಭೂಮಿಯಲ್ಲಿ ರಾಸಾಯನಿಕ ಅಸ್ತ್ರಗಳ ದಾಳಿಗೆ ಬಳಸುವ ಸರಿನ್‌ ಸೇರಿದಂತೆ ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚುವ ಸಾಮರ್ಥ್ಯವುಳ್ಳ ಸ್ಟ್ಯಾಂಪ್ ಗಾತ್ರದ ಸೆನ್ಸರ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. 

ಮನುಷ್ಯನ ನರಮಂಡಲದ ಮೇಲೆ ಹಾನಿ ಉಂಟುಮಾಡುವ ರಾಸಾಯನಿಕ ಸರಿನ್‌ ಹೆಚ್ಚು ಪ್ರಮಾಣದಲ್ಲಿ ಸಂಪರ್ಕಕ್ಕೆ ಬಂದರೆ ಉಸಿರಾಟದ ತೊಂದರೆ, ಪ್ರಜ್ಞಾಹೀನತೆ ಉಂಟಾಗುವ ಸಾಧ್ಯತೆ ಇದೆ.  

‘ಇಂತಹ ರಾಸಾಯನಿಕಗಳನ್ನು ಶೀಘ್ರ ಪತ್ತೆ ಮಾಡಲು ಸಾಧ್ಯವಾದರೆ ಮನುಷ್ಯನಿಗೆ ಅಪಾಯ ಎದುರಾಗುವುದನ್ನು ತಡೆಗಟ್ಟಲು ಸಾಧ್ಯ. ಪ್ರಸ್ತುತ ಇರುವ ಸಣ್ಣಗಾತ್ರದ ಸೆನ್ಸರ್‌ಗಳು ರಾಸಾಯನಿಕ ಪತ್ತೆ ಮಾಡಬಹುದೆ ಹೊರತು, ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿಲ್ಲ. ಸ್ಟ್ಯಾಂಪ್ ಗಾತ್ರದ ಸೆನ್ಸರ್ ಉಪಕರಣ ಅಭಿವೃದ್ಧಿಗೆ ಮುಂದಾದೆವು’ ಎನ್ನುತ್ತಾರೆ ಅಮೆರಿಕದ ಇಲಿನಾಯಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಾಲ್ ಬ್ರೌನ್.  

‘ನಿಜವಾದ ರಾಸಾಯನಿಕ ದಾಳಿ ಎದುರಾದಲ್ಲಿ ಆಗ ಈ ಸೆನ್ಸರ್ ಹೇಗೆ ಕೆಲಸ ಮಾಡಲಿದೆ ಎನ್ನುವುದನ್ನು ಇನ್ನಷ್ಟೇ ಪರೀಕ್ಷಿಸಬೇಕಿದೆ’ ಎಂದು ತಂಡದ ಮತ್ತೊಬ್ಬ ಸದಸ್ಯ ಮೊಹಮ್ಮದ್ ಅಮ್ದದ್ ಅಲಿ 
ತಿಳಿಸಿದ್ದಾರೆ. 

ಇರಾನ್‌ ಖಂಡನೆ

ಟೆಹ್ರಾನ್ (ಎಎಫ್‌ಪಿ): ಇರಾನ್ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆಯ ಅಭ್ಯಾಸ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮಾಡಿರುವ ಆರೋಪವನ್ನು ಇರಾನ್‌ ವಿದೇಶಾಂಗ ಸಚಿವ ಮೊಹಮ್ಮದ್ ಜಾವೆದ್ ಝರಿಫ್ ಪ್ರಬಲವಾಗಿ ಖಂಡಿಸಿದ್ದಾರೆ.

‘ಇಸ್ಲಾಂ ರಾಷ್ಟ್ರಗಳ ವಿರುದ್ಧ ಆಧಾರರಹಿತ ಆರೋಪ ಮಾಡುವುದನ್ನು ಅಮೆರಿಕ ತನ್ನ ಹವ್ಯಾಸವಾಗಿಸಿಕೊಂಡಿದೆ. ಇದು ಅಪಾಯಕಾರಿ ನಡೆ’ ಎಂದಿದ್ದಾರೆ.

ಒಗ್ಗೂಡಲು ಕರೆ:  ಅಮೆರಿಕದ ವಿರುದ್ಧವಾಗಿ ವಿಶ್ವದೆಲ್ಲೆಡೆ ಇರುವ ಮುಸ್ಲಿಮರು ಒಗ್ಗಟ್ಟಾಗಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಶನಿವಾರ ‘ಇಸ್ಲಾಮಿಕ್ ಯುನಿಟಿ ಸಮಾವೇಶ’ದಲ್ಲಿ ಕರೆ ನೀಡಿದ್ದಾರೆ.‘ಸೌದಿ ರಾಷ್ಟ್ರ ನಮ್ಮ ಹಿರಿಯ ಅಣ್ಣ. ಇರಾನ್‌ನಿಂದ ಭೀತಿ ಪಡುವುದು ಬೇಡ’ ಎಂದು ಹೇಳಿದ್ದಾರೆ.