ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಿರ್ದೇಶಕ ಕುಂದನ್ ಷಾ ನಿಧನ

0
32

ಚಿತ್ರ ನಿರ್ದೇಶಕ ಕುಂದನ್‌ ಶಾ (69) ಮುಂಬೈನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 1983ರಲ್ಲಿ ಅವರು ನಿರ್ದೇಶಿಸಿದ್ದ ‘ಜಾನೆ ಭಿ ದೋ ಯಾರೊ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.

“ಜಾನೆ ಬಿ ದೋ ಯಾರೊ” ಮತ್ತು ರೊಮ್ಯಾಂಟಿಕ್ ಪ್ಲೇ “ಕಭಿ ಹಾನ್ ಕಭಿ ನಾ” ದ ನಿರ್ದೇಶಕ ಕುಂದನ್  ಷಾ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅವರಿಗೆ 69 ವರ್ಷವಯಸ್ಸಾಗಿತ್ತು.
 
ಬರಹಗಾರ-ನಟ-ಚಿತ್ರನಿರ್ಮಾಪಕ ಸತೀಶ್ ಕೌಶಿಕ್, ಷಾ ಗೆ ಹೃದಯಾಗಾತವಾಗಿ ಮೃತರಾಗಿದ್ದಾರೆ ಎಂದರು.
 
1983 ರ ವಿಡಂಬನಾತ್ಮಕ ಹಾಸ್ಯ ಚಿತ್ರ ‘ಜಾನೆ ಭಿ ದೋ ಯಾರೊ’ ನಿರ್ದೇಶನಕ್ಕೆ ಷಾ ಪ್ರಥಮ ಚಿತ್ರ ನಿರ್ದೇಶನಕ್ಕಾಗಿ ನೀಡುವ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು.
 
“ನಕ್ಕಡ್” ಮತ್ತು “ವಾಘೆ ಕಿ ದುನಿಯಾ” ನಂತಹ ಕೆಲವು ಜನಪ್ರಿಯ ಟಿವಿ ಕಾರ್ಯಕ್ರಮಗಳು ಸಹ ಷಾ ನಿರ್ದೇಶನದಲ್ಲಿ ಮೂಡಿ ಬಂದಿತ್ತು.
 
ಪೂನಾದ ಚಲನಚಿತ್ರ ಮತ್ತು ಟೆಲಿವಿಷನ್ ಇನ್ ಸ್ಟಿಟ್ಯೂಟ್ ನಲ್ಲಿ ಷಾ ಚಿತ್ರ ನಿರ್ದೇಶನ ತರಬೇತಿ ಪಡೆದಿದ್ದರು.
 
ಷಾ ನಿಧನಕ್ಕೆ ಬಾಲಿವುಡ್ ನ ಗಣ್ಯ ನತರು, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.