ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌: ಅಂಜುಮ್‌, ಮೆಹುಲಿ ಚಿನ್ನದ ಸಾಧನೆ

0
584

ಪಂಜಾ ಬ್‌ನ ಅಂಜುಮ್‌ ಮೌದ್ಗಿಲ್‌ ಮತ್ತು ಬಂಗಾಳದ ಮೆಹುಲಿ ಘೋಷ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮುಂದುವರಿಸಿದ್ದು ಚಿನ್ನದ ಸಾಧನೆ ಮಾಡಿದ್ದಾರೆ.

ತಿರುವನಂತಪುರ (ಪಿಟಿಐ): ಪಂಜಾ ಬ್‌ನ ಅಂಜುಮ್‌ ಮೌದ್ಗಿಲ್‌ ಮತ್ತು ಬಂಗಾಳದ ಮೆಹುಲಿ ಘೋಷ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮುಂದುವರಿಸಿದ್ದು ಚಿನ್ನದ ಸಾಧನೆ ಮಾಡಿದ್ದಾರೆ.

ಎರಡನೇ ದಿನವಾದ ಸೋಮವಾರ ಪಂಜಾಬ್‌ನ ಅಂಜುಮ್‌ 100 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದರು. ಭಾನುವಾರ 50 ಮೀಟರ್ಸ್‌ ರೈಫಲ್ ತ್ರಿ ‍ಪೊಸಿಷನ್‌ನಲ್ಲೂ ಅವರು ಚಿನ್ನ ಗಳಿಸಿದ್ದರು. ಬಂಗಾಳದ ಮೆಹುಲಿ ಘೋಷ್ ನಾಲ್ಕು ಚಿನ್ನ ಗೆದ್ದು ಮಿಂಚಿದರು.

100 ಮೀಟರ್ಸ್ ಏರ್ ರೈಫಲ್‌ನಲ್ಲಿ ಅಂಜುಮ್‌ 249.1 ಸ್ಕೋರ್ ಮೂಲಕ ಪ್ರಥಮ ಸ್ಥಾನ ಗಳಿಸಿದರೆ, ಅವರದೇ ರಾಜ್ಯದ ಜಾಸ್ಮಿನ್‌ ಕೌರ್‌ 247.9 ಸ್ಕೋರ್‌ಗಳೊಂದಿಗೆ ಬೆಳ್ಳಿ ‍ಪದಕ ಗೆದ್ದರು. ತಮಿಳುನಾಡಿನ ಸಿ.ಕವಿ ರಕ್ಷಣ ತೃತೀಯರಾದರು.

ಮೆಹುಲಿ ಘೋಷ್‌ ಜೂನಿಯರ್‌ ಮತ್ತು ಯೂತ್ ವಿಭಾಗದ 10 ಮೀಟರ್ಸ್ ಏರ್‌ ರೈಫಲ್‌ನ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಮಿಂಚು ಹರಿಸಿದರು.

ಯೂತ್ ವಿಭಾಗದ ಫೈನಲ್‌ನಲ್ಲಿ 253 ಸ್ಕೋರ್ ಗಳಿಸಿದ ಅವರು ಜೂನಿಯರ್ ವಿಭಾಗದಲ್ಲಿ 249.1 ಸ್ಕೋರ್ ಗಳಿಸಿದರು.

ಒಲಿಂಪಿಯನ್ ಅಪೂರ್ವಿ ಚಾಂಡೇಲ ಅವರು ಏರ್ ರೈಫಲ್‌ ವಿಭಾಗದ ಫೈನಲ್‌ ಪ್ರವೇಶಿಸಿದರೂ ಪದಕಕ್ಕೆ ಮುತ್ತಿಡಲು ಆಗಲಿಲ್ಲ. ಅವರು ನಾಲ್ಕನೇಯವರಾದರು.

ತಂಡ ವಿಭಾಗದಲ್ಲಿ ಓಎನ್‌ಜಿಸಿಯ ಶ್ರೀಯಾಂಕ ಸಾಧನಗಿ ಮತ್ತು ಗಾಯತ್ರಿ ಪಾವಸ್ಕರ್ ಜೊತೆಗೂಡಿ ಅವರು ಚಿನ್ನ ಗೆದ್ದರು. 1868.5 ಸ್ಕೋರ್ ಗಳಿಸಿದ ಈ ತಂಡ ರಾಜಸ್ಥಾನವನ್ನು (1865) ಹಿಂದಿಕ್ಕಿತು.

ಭಕ್ತಿ ಕಾಮ್ಕರ್‌ಗೆ ಚಿನ್ನದ ಸಂಭ್ರಮ: ಮಹಿಳೆಯರ 30 ಮೀಟರ್ಸ್‌ ರೈಫಲ್ ತ್ರಿ ಪೊಸಿಷನ್‌ ವಿಭಾಗದಲ್ಲಿ ಮಹಾರಾಷ್ಟ್ರದ ಭಕ್ತಿ ಭಾಸ್ಕರ್‌ ಕಾಮ್ಕರ್‌ 441.6 ಸ್ಕೋರ್‌ ಗಳಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಪಶ್ಚಿಮ ಬಂಗಾಳದ ಆಯುಷಿ ಪೋದ್ದಾರ್ (440.4 ಸ್ಕೋರ್‌) ಅವರನ್ನು ಭಕ್ತಿ ಹಿಂದಿಕ್ಕಿದರು.