ರಾಷ್ಟ್ರೀಯ ಶೂಟಿಂಗ್‌ ಟ್ರಯಲ್ಸ್; ಮೆಹುಲಿ ಘೋಷ್‌ಗೆ ಚಿನ್ನ

0
13

ಮೆಹುಲಿ ಘೋಷ್‌ ಅವರು ರಾಷ್ಟ್ರೀಯ ಶೂಟಿಂಗ್‌ ಟ್ರಯಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಮಹಿಳೆಯರ ಸೀನಿಯರ್‌ ಹಾಗೂ ಜೂನಿಯರ್‌ ವಿಭಾಗಗಳ 10 ಮೀಟರ್‌ ಏರ್‌ ರೈಫಲ್ಸ್‌ನಲ್ಲಿ ಸೆಪ್ಟೆಂಬರ್ 10 ರ ಮಂಗಳವಾರ ಅವರು ಅಗ್ರಸ್ಥಾನ ಗಳಿಸಿದರು.

ನವದೆಹಲಿ (ಪಿಟಿಐ): ಮೆಹುಲಿ ಘೋಷ್‌ ಅವರು ರಾಷ್ಟ್ರೀಯ ಶೂಟಿಂಗ್‌ ಟ್ರಯಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.  ಮಹಿಳೆಯರ ಸೀನಿಯರ್‌ ಹಾಗೂ ಜೂನಿಯರ್‌ ವಿಭಾಗಗಳ 10 ಮೀಟರ್‌ ಏರ್‌ ರೈಫಲ್ಸ್‌ನಲ್ಲಿ ಸೆಪ್ಟೆಂಬರ್ 10 ರ  ಮಂಗಳವಾರ ಅವರು ಅಗ್ರಸ್ಥಾನ ಗಳಿಸಿದರು.

ಡಾ.ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಟ್ರಯಲ್ಸ್‌ ನಡೆಯಿತು. ಅನಹದ್‌ ಜವಾಂಡಾ ಹಾಗೂ ಪಾರುಲ್‌ ಕುಮಾರ್‌ ಕ್ರಮವಾಗಿ ಪುರುಷರ 25 ಮೀಟರ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ಹಾಗೂ 50 ಮೀಟರ್‌ ರೈಫಲ್‌ 3 ಪೊಸಿಷನ್‌ನಲ್ಲಿ ಚಿನ್ನ ತಮ್ಮದಾಗಿಸಿಕೊಂಡರು.

ಪಶ್ಚಿಮ ಬಂಗಾಳದ ಮೆಹುಲಿ ಅವರು ದಿನದ ತಾರಾ ಶೂಟರ್‌ ಆಗಿ ಹೊರಹೊಮ್ಮಿದರು. 10 ಮೀ. ಏರ್‌ ರೈಫಲ್‌ನಲ್ಲಿ 252 ಪಾಯಿಂಟ್‌ ಗಳಿಸಿ ಅವರು ಮೊದಲ ಸ್ಥಾನ ಪಡೆದರೆ, ಮಧ್ಯಪ್ರದೇಶದ ಶ್ರೇಯಾ ಅಗರವಾಲ್‌ 251.2 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಗಳಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ರಾಜಸ್ಥಾನದ ಅಪೂರ್ವಿ ಚಾಂಡೇಲ (229.3) ಅವರಿಗೆ ಮೂರನೇ ಸ್ಥಾನ ದಕ್ಕಿತು.

ಮಹಿಳೆಯರ ಜೂನಿಯರ್‌ 10 ಮೀಟರ್‌ ಏರ್‌ ರೈಫಲ್ಸ್‌ ವಿಭಾಗದಲ್ಲಿ ಮೆಹುಲಿ ಅವರ ಗೆಲುವು ಮತ್ತಷ್ಟು ಪರಿಪೂರ್ಣವಾಗಿತ್ತು. 252.2 ಪಾಯಿಂಟ್‌ ಗಳಿಸಿ ಮೊದಲ ಸ್ಥಾನ , ಪಂಜಾಬ್‌ನ ಖುಷಿ ಸೈನಿ (248.8) ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರು. ಮಧ್ಯಪ್ರದೇಶದ ಮಾನಸಿ ಕಥೈತ್‌ (227.5) ಹಾಗೂ ಶ್ರೇಯಾ ಅಗರವಾಲ್‌ (205.8) ಕ್ರಮವಾಗಿಮೂರನೇ ಸ್ಥಾನ ಮತ್ತು ನಾಲ್ಕನೇ ಸ್ಥಾನ ಪಡೆದರು
 
ಮಹಿಳೆಯರ ಜೂನಿಯರ್‌ 10 ಮೀಟರ್‌ ಏರ್‌ ರೈಫಲ್ಸ್‌ ವಿಭಾಗದಲ್ಲಿ ಮೆಹುಲಿ ಗೆಲುವು ಪರಿಪೂರ್ಣವಾಗಿತ್ತು.