ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ “ಅಜಿತ್ ದೋವಲ್” ಮರು ಆಯ್ಕೆ ಹಾಗೂ ಸಂಪುಟ ದರ್ಜೆ ಸ್ಥಾನಮಾನ

0
42

ಪ್ರಧಾನಿ ನರೇಂದ್ರ ಮೋದಿಯ ಅತಿ ನಂಬಿಗಸ್ಥ ಅಜಿತ್ ದೋವಲ್​ರನ್ನು ಸತತ ಎರಡನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ(ಎನ್​ಎಸ್​ಎ) ಕೇಂದ್ರ ಸರ್ಕಾರ ನೇಮಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಎನ್​ಎಸ್​ಎಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಬಡ್ತಿ ಕೊಡಲಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅತಿ ನಂಬಿಗಸ್ಥ ಅಜಿತ್ ದೋವಲ್​ರನ್ನು ಸತತ ಎರಡನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ(ಎನ್​ಎಸ್​ಎ) ಕೇಂದ್ರ ಸರ್ಕಾರ ನೇಮಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಎನ್​ಎಸ್​ಎಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಬಡ್ತಿ ಕೊಡಲಾಗಿದೆ.

ಕಳೆದ ಐದು ವರ್ಷದ ಎನ್​ಡಿಎ ಸರ್ಕಾರದ ವಿದೇಶಾಂಗ ನೀತಿ, ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿಗ್ರಹದಲ್ಲಿ ಪ್ರಮುಖ ಪಾತ್ರವಹಿಸಿದ್ದ 74 ವರ್ಷದ ದೋವಲ್ ಅವರನ್ನು ಮುಂದಿನ 5 ವರ್ಷಗಳವರೆಗೆ ಮುಂದುವರಿಸಲು ಮೋದಿ ನಿರ್ಧರಿಸಿದ್ದಾರೆ. ಈ ಮೂಲಕ ಮೋದಿ ಸರ್ಕಾರದ ಆಡಳಿತದಲ್ಲಿ 75 ವರ್ಷಗಳ ಮೇಲ್ಪಟ್ಟವರಿಗೆ ಜಾಗವಿಲ್ಲ ಎನ್ನುವ ಅಲಿಖಿತ ನಿಯಮ ಬದಿಗಿರಿಸಲಾಗಿದೆ.

ದೋವಲ್ ನೇಮಕಕ್ಕೆ ಸಂಬಂಧಿಸಿ ಕಳೆದೊಂದು ವಾರದಿಂದ ಬೇರೆ ರೀತಿ ಗಾಳಿಸುದ್ದಿ ಹರಡಿತ್ತು. ನರೇಂದ್ರ ಮೋದಿಯ ಎರಡನೇ ಅವಧಿಯಲ್ಲಿ ಹೊಸ ಎನ್​ಎಸ್​ಎ ನೇಮಕ ನಡೆಯಲಿದೆ ಎಂಬ ವರದಿಗಳು ಬಂದಿದ್ದವು. ಆದರೆ ಈ ಊಹಾಪೋಹಗಳಿಗೆ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ನಿರ್ವಹಣಾ ಇಲಾಖೆ ಸೋಮವಾರ ತೆರೆ ಎಳೆದಿದೆ. ‘ಮೇ 31ರಿಂದ ಅನ್ವಯವಾಗುವಂತೆ ಮುಂದಿನ 5 ವರ್ಷಗಳ ಅವಧಿಗೆ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರಲಿದ್ದಾರೆ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಹೀಗಾಗಿ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿಯೂ ದೋವಲ್ ಪ್ರಭಾವಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಮೋದಿಯ ಬಲಗೈ ಬಂಟ ಎಂದು ಪರಿಗಣಿಸಲಾಗುವ ದೋವಲ್, ಭದ್ರತೆಗೆ ಸಂಬಂಧಿತ ಸಂಪುಟ ಸಮಿತಿಯಲ್ಲೂ ಇರಲಿದ್ದಾರೆ. ಜತೆಗೆ ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ಸಂಬಂಧಿಸಿದ ಉನ್ನತ ಸಮಿತಿಯ ಮುಖ್ಯಸ್ಥರಾಗಿಯೂ ಮುಂದುವರಿಯಲಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರರಿಗಿರುವ ಸವಾಲುಗಳು

# ಉಗ್ರ ದಾವೂದ್ ಇಬ್ರಾಹಿಂ ಬೇಟೆ

# ಪಾಕಿಸ್ತಾನದಲ್ಲಿನ ಉಗ್ರ ಸಂಘಟನೆಗಳ ನಿಗ್ರಹ

# ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮರುಸ್ಥಾಪನೆ

# ಕಾಶ್ಮೀರ ಸಮಸ್ಯೆಗೆ ಪರಿಹಾರ

# 5 ವರ್ಷಗಳಲ್ಲಿ ದೋವಲ್ ಸಾಧನೆ

# ಅರಬ್ ರಾಷ್ಟ್ರಗಳ ಜತೆ ಭಾರತದ ಸಂಬಂಧ ಸುಧಾರಣೆ

# ಉರಿ ಹಾಗೂ ಪುಲ್ವಾಮಾ ದಾಳಿ ಬಳಿಕದ ಸರ್ಜಿಕಲ್ ಸ್ಟ್ರೈಕ್ ತಂತ್ರಗಾರಿಕೆ

# ಡೋಕ್ಲಾಮ್ ವಿವಾದ ತೆರೆ

# ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರ ಜತೆ ಶಾಂತಿ ಮಾತುಕತೆ

# ಅಗಸ್ತಾ ವೆಸ್ಟ್​ಲ್ಯಾಂಡ್ ದಲ್ಲಾಳಿ ಮಿಶೆಲ್ ಹಸ್ತಾಂತರ