ರಾಯಲ್‌ ಸೊಸೈಟಿ ಫೆಲೋಗೆ ಭಾಜನರಾದ ಭಾರತೀಯ ಮೊದಲ ಮಹಿಳಾ ವಿಜ್ಞಾನಿ “ಗಗನ್‌ದೀಪ್‌ ಕಾಂಗ್‌ “

0
488

ಭಾರತೀಯವಿಜ್ಞಾನಿ ಗಗನ್‌ದೀಪ್‌ ಕಾಂಗ್‌ ಅವರು ಲಂಡನ್‌ ನೀಡುವ ಪ್ರತಿಷ್ಠಿತ ಪ್ರಶಸ್ತಿ ರಾಯಲ್‌ ಸೊಸೈಟಿ ಫೆಲೋಗೆ ಭಾಜನರಾದರು. ಈ ಮೂಲಕ ರಾಯಲ್‌ ಸೊಸೈಟಿ ಫೆಲೋ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಲಂಡನ್‌: ಭಾರತೀಯವಿಜ್ಞಾನಿ ಗಗನ್‌ದೀಪ್‌ ಕಾಂಗ್‌ ಅವರು ಲಂಡನ್‌ ನೀಡುವ ಪ್ರತಿಷ್ಠಿತ ಪ್ರಶಸ್ತಿ ರಾಯಲ್‌ ಸೊಸೈಟಿ ಫೆಲೋಗೆ ಭಾಜನರಾದರು. ಈ ಮೂಲಕ “ರಾಯಲ್‌ ಸೊಸೈಟಿ ಫೆಲೋ ಪ್ರಶಸ್ತಿ” ಪಡೆದ ಭಾರತದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ವಿಜ್ಞಾನ ಸಾಧಕರನ್ನು ಗುರುತಿಸಿ, ಗೌರವಿಸುವ ಇಂಗ್ಲೆಂಡ್‌ನ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಇಂಗ್ಲೆಂಡ್‌ ಮತ್ತು ಕಾಮನ್‌ವೆಲ್ತ್‌ನ ಸ್ವತಂತ್ರ ವಿಜ್ಞಾನ ಅಕಾಡೆಮಿ ನೀಡುವ ಪ್ರಶಸ್ತಿ ಇದಾಗಿದೆ. ವಿಶ್ವದ ಪುರಾತನ ವಿಜ್ಞಾನ ಅಕಾಡೆಮಿ ಇದಾಗಿದ್ದು, 10 ಹೊಸ ವಿದೇಶಿ ವಿಜ್ಞಾನಿಗಳು ಸೇರಿದಂತೆ 51 ಸಾಧಕರಿಗೆ ರಾಯಲ್‌ ಸೊಸೈಟಿ ಫೆಲೋ ಪ್ರಶಸ್ತಿ ನೀಡಿದೆ. 

ಭಾರತದ ಟ್ರಾನ್ಸ್‌ಲೇಷನ್‌ ಹೆಲ್ತ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಇನ್ಸ್‌ಟಿಟ್ಯೂಟ್‌ನ ಪ್ರಧಾನ ನಿರ್ದೇಶಕಿಯಾಗಿ ಕಾಂಗ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. 359 ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಭಾರತದ ಮೊದಲ ಮಹಿಳೆಯಾಗಿದ್ದಾರೆ. 

ಟೈಫೈಡ್‌ ಮತ್ತು ರೊಟವಿರಸ್‌ ವಿರುದ್ಧ ಹೋರಾಡುವ ಲಸಿಕೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್‌ ಅವರ ಕೊಡುಗೆ ಪ್ರಮುಖವಾಗಿದೆ. ಸೋಂಕು, ಕರುಳಿನ ಕ್ರಿಯೆ, ದೈಹಿಕವಾಗಿ ಮತ್ತು ಅರಿವಿನ ಬೆಳವಣಿಗೆ ನಡುವಣ ಸಂಬಂಧದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಭಾರತದಲ್ಲಿ ಹ್ಯೂಮನ್‌ ಇಮ್ಯುನೋಲಜಿ ರೀಸರ್ಜ್‌ ಅಭಿವೃದ್ಧಿಯ ಕನಸು ಇಟ್ಟುಕೊಂಡಿದ್ದಾರೆ.