ರಾಥೋಡ್‌ ಭಾರತ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಕೋಚ್‌

0
15

ಮಾಜಿ ಆರಂಭ ಆಟಗಾರ ವಿಕ್ರಮ್‌ ರಾಥೋಡ್‌ ಅವರನ್ನು ಸಂಜಯ್‌ ಬಂಗಾರ್ ಸ್ಥಾನದಲ್ಲಿ ಭಾರತ ಕ್ರಿಕೆಟ್‌ ತಂಡದ ಬ್ಯಾಟಿಂಗ್ ಕೋಚ್‌ ಆಗಿ ನೇಮಕ ಮಾಡಲಾಗಿದೆ.

‌ಮುಂಬೈ: ಮಾಜಿ ಆರಂಭ ಆಟಗಾರ ವಿಕ್ರಮ್‌ ರಾಥೋಡ್‌ ಅವರನ್ನು ಸಂಜಯ್‌ ಬಂಗಾರ್ ಸ್ಥಾನದಲ್ಲಿ ಭಾರತ ಕ್ರಿಕೆಟ್‌ ತಂಡದ ಬ್ಯಾಟಿಂಗ್ ಕೋಚ್‌ ಆಗಿ ನೇಮಕ ಮಾಡಲಾಗಿದೆ. ಭರತ್‌ ಅರುಣ್‌ ಮತ್ತು ಆರ್‌.ಶ್ರೀಧರ್ ಅವರು ಕ್ರಮವಾಗಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ.

ಕೋಚ್‌ಗೆ ಬೆಂಬಲ ಸಿಬ್ಬಂದಿಯಾಗಿ ಮೂರು ವಿಭಾಗಗಳಲ್ಲಿ ತಲಾ ಮೂವರ ಹೆಸರನ್ನು ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ  ಶಿಫಾರಸು ಮಾಡಿತ್ತು. ಇವರಲ್ಲಿ ಪ್ರತೀ ವಿಭಾಗಗಳಲ್ಲಿ ಮೊದಲ ಸ್ಥಾನದಲ್ಲಿದ್ದವರ ಹೆಸರನ್ನು ಪರಿಗಣಿಸ ಲಾಯಿತು. ಹಿತಾಸಕ್ತಿ ಸಂಘರ್ಷ ವ್ಯಾಪ್ತಿಯ ಪರಿಶೀಲನೆ ನಂತರ ಅಧಿಕೃತ ವಾಗಿ ಹೆಸರನ್ನು ಪ್ರಕಟಿಸಲಾಗುವುದು.

50 ವರ್ಷದ ರಾಥೋಡ್‌ 1996ರಲ್ಲಿ ಆರು ಟೆಸ್ಟ್ ಹಾಗೂ ಏಳು ಏಕದಿನ ಪಂದ್ಯಗಳನ್ನು ಆಡಿದ್ದರು. ಅಂಥ ಯಶಸ್ಸು ಕಂಡಿರಲಿಲ್ಲ. ಸಂದೀಪ್‌ ಪಾಟೀಲ್‌ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾಗ (2016) ಅವರು ಸದಸ್ಯರಾಗಿದ್ದರು.