ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನ “ಪರಿಹಾರ ನಿಧಿ”ಗೆ ನೀಡುವಂತೆ “ಕೇರಳ ಸರಕಾರ” ಆದೇಶ!

0
1049

ಕೇರಳ ಸರಕಾರಿ ನೌಕರರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿರುವ ಹಣಕಾಸು ಸಚಿವ ಥಾಮಸ್‌ ಐಸಾಕ್‌, ಈ ಸಂಬಂಧ ಸರಕಾರಿ ಆದೇಶ ಹೊರಡಿಸಿದ್ದಾರೆ.

ತಿರುವನಂತಪುರ: ಕೇರಳ ಸರಕಾರಿ ನೌಕರರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿರುವ ಹಣಕಾಸು ಸಚಿವ ಥಾಮಸ್‌ ಐಸಾಕ್‌, ಈ ಸಂಬಂಧ ಸರಕಾರಿ ಆದೇಶ ಹೊರಡಿಸಿದ್ದಾರೆ. 

ಶತಮಾನ ಕಂಡ ಭೀಕರ ನೆರೆಗೆ ಕೇರಳ ಈ ವರ್ಷ ಸಾಕ್ಷಿಯಾಗಿದ್ದು, ಸಂತ್ರಸ್ತರ ನೆರವಿಗಾಗಿ ಸರಕಾರಿ ನೌಕರರು ತಮ್ಮ ಒಂದು ತಿಂಗಳ ವೇತನ ಪರಿಹಾರಕ್ಕಾಗಿ ವಿನಿಯೋಗಿಸಲು ಅವರು ತಿಳಿಸಿದ್ದಾರೆ. ವೇತನ ನೀಡಲು ಇಷ್ಟ ಇಲ್ಲದೇ ಹೋದಲ್ಲಿ ಸಂಬಂಧಪಟ್ಟ ವಿಭಾಗ ಮುಖ್ಯಸ್ಥರಿಗೆ ಮಾಹಿತಿ ನೀಡುವಂತೆಯೂ ಅವರು ಆದೇಶದಲ್ಲಿ ಹೇಳಿದ್ದಾರೆ. 

ವೇತನ ಅಲ್ಲದೆ, ನೌಕರರು ತಮ್ಮ ಇನ್ನಿತರ ಭತ್ಯೆಗಳನ್ನೂ ಪರಿಹಾರ ನಿಧಿಗೆ ನೀಡಬಹುದು ಎಂದು ಆದೇಶದಲ್ಲಿ ಹೇಳಿದ್ದಾರೆ. 
ಥಾಮಸ್ ಐಸಾಕ್ ಆದೇಶ ಹೊರಡಿಸಿರುವುದಕ್ಕೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಆದೇಶ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ನೌಕರರು ಸ್ವಯಂ ಪ್ರೇರಿತವಾಗಿ ವೇತನ ನೀಡುವುದಕ್ಕೂ, ಒತ್ತಾಯಪೂರಕವಾಗಿ ಪರಿಹಾರ ನಿಧಿಗೆ ಹಣ ನೀಡುವುದಕ್ಕೂ ವ್ಯತ್ಯಾಸವಿದೆ ಎಂದು ಸಂಘಟನೆಗಳು ಹೇಳಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಥಾಮಸ್‌, ಇಂಥ ನಾಟಕಗಳನ್ನು ಮೊದಲು ನಿಲ್ಲಿಸಬೇಕು. ಮುಖ್ಯಮಂತ್ರಿಗಳಪರಿಹಾರ ನಿಧಿ ಕೊಡುಗೆ ನೀಡಲು ಇಚ್ಛೆ ಇಲ್ಲದೇ ಹೋದಲ್ಲಿ ಬಹಿರಂಗ ಪಡಿಸಲಿ ಎಂದಿದ್ದಾರೆ.